More

    ಬೆಳ್ಳಂಬೆಳಗ್ಗೆ ರಾಜ್ಯದ 60 ಕಡೆ ದಾಳಿ ಲೋಕಾಯುಕ್ತ ದಾಳಿ

    ಬೆಂಗಳೂರು:  ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಸಂಪತ್ತು ಗಳಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ  ಲೋಕಾಯುಕ್ತ ಅಧಿಕಾರಿಗಳು 60 ಕಡೆ  ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.

    ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 60 ಕಡೆ ಈ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಒಟ್ಟು ಐದು ಕಡೆ ದಾಳಿ ನಡೆದಿದೆ.  ಬಿಬಿಎಂಪಿ ಚೀಫ್ ಇಂಜಿನಿಯರ್ ರಂಗನಾಥ್ ಮನೆ ಸೇರಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ  ಲೋಕಾಯುಕ್ತ ದಾಳಿ  ನಡೆದಿದೆ. ಮುಂಜಾನೆಯೇ ದಾಳಿ ನಡೆಸಿ  ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿಗಳು, 25 ಪಿಐಗಳು ಸೇರಿದಂತೆ 130 ಅಧಿಕಾರಿಗಳು ಲೋಕಾಯುಕ್ತ ದಾಳಿಗಳಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮಹಾನಗರಪಾಲಿಕೆ ಚೀಫ್‌ ಎಂಜಿನಿಯರ್ ರಂಗನಾಥ್ ಎಸ್‌.ಪಿ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬ್ಯಾಟರಾಯನಪುರ- ಯಲಹಂಕ ವಲಯದ ಅಧಿಕಾರಿಯಾಗಿರುವ ರಂಗನಾಥ್‌ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ರಂಗನಾಥ್ ಎಸ್.ಪಿ – ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್ ಗೆ ಸಂಬಂಧಿಸಿದ ಬೆಂಗಳೂರಿನ 5 ಸ್ಥಳಗಳು

    ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳು

    ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಪ್ರಕಾಶ್ ಆರ್. ರೇವಣಕರ್  ಸಂಬಂಧಿಸಿದ ಕಾರವಾರ – ಉ.ಕ ಜಿಲ್ಲೆಯ 4 ಸ್ಥಳಗಳು ಮಹತ್ವದ ದಾಖಲೆ ,ವಾಹನ ಸೇರಿ ಅಧಿಕಾರಿಗಳು ಇತರೆ ಸೊತ್ತುಗಳ ಪರಿಶೀಲನೆ  ನಡೆಸುತ್ತಿದ್ದಾರೆ.

    ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ 12 ಸ್ಥಳಗಳು

    ಜಯಣ್ಣ ಬಿ.ವಿ. ಮುಖ್ಯ ಕಾರ್ಯಕಾರಿ ಅಭಿಯಂತರ, ಕೊಡಗು

    ಮಹೇಶ್ ಚಂದ್ರಯ್ಯ ಹೀರೆಮಠ್- ಅರಣ್ಯ ವಲಯದ ಅಧಿಕಾರಿ- ಧಾರವಾಡದ 6 ಸ್ಥಳಗಳು

    ಶಿವಕುಮಾರಸ್ವಾಮಿ- ಎಕ್ಸಿಕ್ಯೂಟಿವ್ ಇಂಜಿನಿಯರ್ ಬೀದರ್ ನ 4 ಸ್ಥಳಗಳು

    ನಾಗರಾಜಪ್ಪ- ಅಸ್ಟಿಸೆಂಟ್ ಡೈರೆಕ್ಟರ್ ಕೋಲಾರದ ಐದು ಕಡೆಗಳಲ್ಲಿ

    ಷಣ್ಮುಗಪ್ಪ, ಎಆರ್ ಟಿಓ ಜಮಖಂಡಿ, ಬಾಗಲಕೋಟೆಯ ನಾಲ್ಕು ಕಡೆಗಳಲ್ಲಿ

    ಸದಾಶಿವಯ್ಯ, ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಬಳ್ಳಾಪುರದ 6 ಕಡೆಗಳಲ್ಲಿ ದಾಳಿ

    ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮ ಪಂಚಾಯತಿ ಲೆಕ್ಕಸಹಾಯಕ  ಕೃಷ್ಣೇಗೌಡ ಮನೆ, ಕಚೇರಿ ಮೇಲೆ ಲೋಕಾ ದಾಳಿ ನಡೆದಿದೆ. ಬೆಳ್ಳಂ ಬೆಳ್ಳಿಗೆ ಏಕಕಾಲಕ್ಕೆ ಎರಡು‌ ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ ಹಾಗೂ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಮಂಡ್ಯ ನಾಲ್ಕು ಕಡೆಗಳಲ್ಲಿ ದಾಳಿ.

    ಸದಾಶಿವ ಜಯಪ್ಪ, ಸೆಕ್ರೆಟರಿ ಪಿಡಿಓ, ನಿಡಗುಂದಿ ಗ್ರಾಮ ಬೆಳಗಾವಿಯ 3 ಕಡೆಗಳಲ್ಲಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts