More

    ಹಿರಿಯ ನಟ, ಚಿಂತಕ ಪ್ರೊ. ಜಿ.ಕೆ.ಗೋವಿಂದ ರಾವ್ ನಿಧನ

    ಹುಬ್ಬಳ್ಳಿ: ಕನ್ನಡ ಚಲನಚಿತ್ರ ನಟ, ಚಿಂತಕ, ಕಾದಂಬರಿಕಾರ ಪ್ರೊ. ಜಿ.ಕೆ.ಗೋವಿಂದರಾವ್(84) ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.

    1937ರಲ್ಲಿ ಜನಿಸಿದ್ದ ಗೋವಿಂದರಾವ್​, ಬೆಂಗಳೂರಿನ ಸೇಂಟ್​ ಜೋಸೆಫ್​ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ನಾಟಕ ರಚನೆ, ವಿಮರ್ಶೆ, ಅನುವಾದ ಮಾಡುತ್ತಿದ್ದರು. ರಂಗಭೂಮಿ ಚಟುವಟಿಕೆಯಲ್ಲೂ ಗುರುತಿಸಿಕೊಂಡಿದ್ದರು. ಪುಟ್ಟಣ್ಣ ಕಣಗಾಲ್​ ಅವರ ಕಥಾ ಸಂಗಮದ 3 ಕಿರುಚಿತ್ರಗಳ ಪೈಕಿ ‘ಹಂಗು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಆ ನಂತರ ಕಾಲೇಜು ರಂಗ, ಕಾನೂರು ಹೆಗ್ಗಡತಿ, ಡಾ.ಕೃಷ್ಣ, ಭಾರತ್​ 2000, ರೇ, ಬಂಧನ.. ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇವರ ಕೊನೆಯ ಚಿತ್ರ ರೇ.

    ಇತ್ತೀಚಿಗೆ ಚಿತ್ರರಂಗದಿಂದ ದೂರವಿದ್ದ ಗೋವಿಂದ ರಾಜು ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಕೋಟಿಗೊಬ್ಬ-3 ರಿಲೀಸ್​: ಮುಗಿಲು ಮುಟ್ಟಿದೆ ಅಭಿಮಾನಿಗಳ ಹರ್ಷೋದ್ಘಾರ

    ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts