More

    ಜೇಮ್ಸ್​ ಸಿನಿಮಾ ಮೇಕಿಂಗ್​ ವಿಡಿಯೋ ವೈರಲ್​: ಅಪ್ಪು ಕಂಡು ಭಾವುಕರಾದ ಅಭಿಮಾನಿಗಳು

    ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದ ಪುನೀತ್​, ಇಂದಿಗೂ ಅವರ ಪಾಲಿಗೆ ‘ರಾಜಕುಮಾರ’. ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಅಪ್ಪು, ಭೂತಾಯಿಯ ಮಡಿಲು ಸೇರಿ ವಾರವೇ ಕಳೆದಿದೆ. ಆದರೂ ಅವರ ಅಭಿಮಾನಿಗಳ ಮನದಲ್ಲಿ ಅಪ್ಪು ಅಗಲಿಕೆಯ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಅಪ್ಪು ಅಭಿನಯದ ಸಿನಿಮಾ, ಹಾಡು, ಹಳೇ ಫೋಟೋಗಳನ್ನ ಅಭಿಮಾನಿಗಳು ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿಕೊಳ್ಳುತ್ತಾ ಮಿಸ್​ ಯೂ ಅಪ್ಪು ಎಂದು ಕಂಬನಿ ಮಿಡಿಯುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ‘ಜೇಮ್ಸ್’​ ಸಿನಿಮಾದ ಮೇಕಿಂಗ್​ ವಿಡಿಯೋ ತುಣುಕೊಂದು ವೈರಲ್​ ಆಗಿದ್ದು, ಅಪ್ಪು ಅಭಿಮಾನಿಗಳು ಅದನ್ನು ನೋಡಿ ಭಾವುರಾಗಿದ್ದಾರೆ.

    ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ನಾಯಕ ನಟರಾಗಿ ಅಭಿನಯಿಸುತ್ತಿದ್ದರು. ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿತ್ತು. ಕೊನೇ ಹಂತದ ಶೂಟಿಂಗ್ ಮಾತ್ರ ಬಾಕಿ ಉಳಿದಿತ್ತು. ‘ಕ್ರಿಸ್​ಮಸ್​​’ಗೆ ‘ಜೇಮ್ಸ್‘ ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆಯನ್ನೂ ಚಿತ್ರತಂಡ ಹಾಕಿಕೊಂಡಿತ್ತು. 2022ರ ಮಾರ್ಚ್​ನಲ್ಲಿ ಅಪ್ಪು ಬರ್ತ್​ ಡೇ ಪ್ರಯುಕ್ತ ಜೇಮ್ಸ್​ ಬಿಡುಗಡೆ ಮಾಡಲು ಪ್ಲಾನ್​ ಮಾಡಿತ್ತು. ಈ ಸಿನಿಮಾದಲ್ಲಿ ಬಾಕಿ ಇದ್ದ ಒಂದು ಹಾಡಿನ ಚಿತ್ರೀಕರಣಕ್ಕೆ ನ.8ರಂದು ಪುನೀತ್​ ಡೇಟ್​ ಕೂಡ ಕೊಟ್ಟಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಅ.29ರಂದು ಹೃದಯಾಘಾತದಿಂದ ಪುನೀತ್​ ಅಕಾಲಿಕ ಮರಣಕ್ಕೀಡಾದರು.

    ಇದೀಗ ಜೇಮ್ಸ್​ ಚಿತ್ರದ ಮೇಕಿಂಗ್​ ವಿಡಿಯೋ ತುಣುಕೊಂಡು ವೈರಲ್​ ಆಗಿದೆ. ಪುನೀತ್​ ಫಾಲ್ಸ್​ ಬಳಿ ನಿಂತಿದ್ದಾರೆ. ಈ ವೇಳೆ ಡ್ರೋನ್​ನಲ್ಲಿ ವಿಡಿಯೋ ಶೂಟಿಂಗ್​ ಮಾಡಲಾಗಿದೆ. ಜೇಮ್ಸ್​ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ಇದಾಗಿದ್ದು, ಈಗ ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ‘ಮಿಸ್​ ಯೂ ಅಪ್ಪು’ ಎಂದು ಭಾವುಕರಾಗಿದ್ದಾರೆ.

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts