More

    ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್​ಗೆ ಬ್ರಿಟನ್​ ಪ್ರಧಾನಿ ಸ್ಥಾನ ಒಲಿಯುವ ಸಾಧ್ಯತೆ

    ಲಂಡನ್​: ಬ್ರಿಟನ್​ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಬೋರಿಸ್​ ಜಾನ್ಸನ್ ಒಪ್ಪಿಗೆ ಸೂಚಿಸಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಒಂದು ದಿನದ ಹಿಂದಷ್ಟೇ ಬ್ರಿಟನ್​ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಆಯ್ಕೆಯಾಗುವ ಸಾಧ್ಯತೆ ಇದೆ.

    ಬೋರಿಸ್​ ಜಾನ್ಸನ್​ರ ಆಡಳಿತ ವೈಖರಿ ವಿರುದ್ಧವೇ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಲ್ಲೇ ಅಸಮಾಧನ ಭುಗಿಲೆದ್ದಿದ್ದು, ಕಳೆದ ಎರಡು ದಿನಗಳಿಂದ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದಾರೆ. ಬೋರಿಸ್​​​​ ಜಾನ್ಸನ್​ ಭಾರೀ ಹಿನ್ನಡೆಯಾಗಿದ್ದು, ಪ್ರಧಾನಿ ಹುದ್ದೆ ತೊರೆಯುವುದು ಬೋರಿಸ್​ ಜಾನ್ಸನ್​ಗೆ ಅನಿವಾರ್ಯ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಬ್ರಿಟನ್​ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದ್ದು, ಭಾರತೀಯ ಮೂಲದ ರಿಷಿ ಸುನಕ್​ ಹೆಸರು ಮುಂಚೂಣಿಯಲ್ಲಿದೆ.

    2020ರ ಫೆಬ್ರವರಿಯಲ್ಲಿ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ರಿಷಿ ಸುನಾಕ್, 2020ರಲ್ಲಿ ಕೋವಿಡ್​ ಭೀತಿಯ ಮಧ್ಯೆಯೂ ಮಂಡಿಸಿದ ಮೊದಲ ಬಜೆಟ್​ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್​ನಂತಹ ಸಂಕಷ್ಟ ಕಾಲದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರಿಷಿ ಸುನಾಕ್ ಜಾರಿಗೆ ತಂದಿದ್ದರು. ಆದರೆ, ಕೋವಿಡ್​ ಸಂಕಷ್ಟ ಕಾಲ ನಿರ್ವಹಣೆಯಲ್ಲೂ ವಿಫಲವಾಗಿದ್ದ ಬೋರಿಸ್​, ಸಂಬಳ ಸಾಕಾಗುತ್ತಿಲ್ಲ ಎಂದೇಳಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಸ್ವಪಕ್ಷದಲ್ಲೇ ಬೋರಿಸ್​ ಜಾನ್ಸನ್ ವಿರುದ್ಧ ಭಾರೀ ಅಸಮಾಧಾನವಿದೆ. ಯುವ ನಾಯಕ ರಿಷಿ ಸುನಕ್​ ಅವರಿಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್​ನ ಮುಂದಿನ ಪ್ರಧಾನಿ ಸ್ಥಾನ ರಿಷಿ ಸುನಾಕ್​ಗೆ ಒಲಿಯಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

    ರಾಜೀನಾಮೆಗೆ ಒಪ್ಪಿದ ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​: ಇಂದೇ ಪ್ರಧಾನಿ ಹುದ್ದೆ ತೊರೆಯುವ ಸಾಧ್ಯತೆ

    ದೇವೇಗೌಡರನ್ನು ಹಾಡಿಹೊಗಳುತ್ತಲೇ ನನ್ನ ಪುತ್ರಿಯೂ ಬೆನ್ನ ಹಿಂದಿದ್ದಾಳೆ… ಎಂದ ಕೆ.ಎಚ್​.ಮುನಿಯಪ್ಪ!

    ಚಿರತೆ ದಾಳಿಗೆ ಬಲಿಯಾಗಿದ್ದ ಕರು ಶವವನ್ನು ಪತ್ತೆಹಚ್ಚಿದ ತಾಯಿಹಸು: ಮಳವಳ್ಳಿಯಲ್ಲಿ ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts