More

    ಜಾರಿ ಬಂದು ದಿಣ್ಣೆ ಮೇಲೆ ನಿಂತ ಬೃಹತ್ ಬಂಡೆ

    ಭಟ್ಕಳ: ತಾಲೂಕಿನ ಕೋಣಾರ ಗ್ರಾಪಂ ವ್ಯಾಪ್ತಿಯ ಬಿಳೂರ ಗ್ರಾಮದಲ್ಲಿ ಬೃಹತ್ ಗಾತ್ರದ ಬಂಡೆಯೊಂದು ಬುಧವಾರ ಕೆಳಗೆ ಜಾರಿ ಬಂದು ಕುಂಟವಾಣಿ ಮಾರುಕೇರಿ ರಸ್ತೆ ಮೇಲ್ಭಾಗದ ದಿಣ್ಣೆಯ ಮೇಲೆ ನಿಂತಿದ್ದರಿಂದ ಮುಂದಾಗಬಹುದಾಗಿದ್ದ ಸಂಭಾವ್ಯ ಅನಾಹುತ ತಪ್ಪಿದೆ.

    ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೋಣಾರ ಗ್ರಾಪಂ ವ್ಯಾಪ್ತಿಯ ಬಿಳೂರು ಗ್ರಾಮದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಿಳೂರಮನೆ ಗ್ರಾಮದ ಗುಡ್ಡದ ಮೇಲಿನ ಬಂಡೆಯೊಂದು ಜಾರಿ ಬಂದು ಹೀಗೆ ನಿಂತಿಕೊಂಡಿದೆ.

    ರಸ್ತೆ ಕೆಳಭಾಗದಲ್ಲಿ ವಾಸದ ಮನೆಗಳಿದ್ದು, ಅದು ಜಾರಿ ರಸ್ತೆಗೆ ಬಂದಲ್ಲಿ ಜೀವ ಹಾನಿಯಾಗುವ ಸಾಧ್ಯತೆ ಇದೆ. ಮಳೆ ಅಬ್ಬರ ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದಾಗಿ ಸ್ಥಳೀಯರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

    ಕೂಡಲೆ, ಬಂಡೆ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ನೋಡೆಲ್ ಅಧಿಕಾರಿ ಮಲ್ಲಪ್ಪ, ಗ್ರಾಮ ಲೆಕ್ಕಾಧಿಕಾರಿ ಶಂಭು ಹಾಗೂ ಕೋಣಾರ ಗ್ರಾಮ ಪಂಚಾಯಿತಿ ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts