More

    ಎದುರಾಳಿಗಳ ಹಿಮ್ಮೆಟ್ಟಿಸಲು ಕರಾಟೆ ಸಹಕಾರಿ

    ಭಟ್ಕಳ: ನಮ್ಮಲ್ಲಿ ಸಾಮರ್ಥ್ಯ ಇಲ್ಲದಿದ್ದಾಗ, ನಾವು ದುರ್ಬಲರಾದಾಗ ಎದುರಾಳಿಗಳು ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅಥವಾ ಸೋಲಿಸಲು ಯತ್ನಿಸುತ್ತಾರೆ. ಅದಕ್ಕೆ ಅವಕಾಶ ನೀಡದೆ ಎದುರಾಳಿಗಳನ್ನು ಧೈರ್ಯದಿಂದ ಹಿಮ್ಮೆಟ್ಟಿಸಲು ಕರಾಟೆಯಂತಹ ಕ್ರೀಡೆಗಳು ಸಹಕಾರಿ ಎಂದು ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

    ತಾಲೂಕಿನ ಬೇಂಗ್ರೆ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರಾಟೆಯಿಂದ ಸ್ವರಕ್ಷಣೆ ಮಾತ್ರವಲ್ಲ, ಕುಟುಂಬ ಹಾಗೂ ಎಲ್ಲರ ರಕ್ಷಣೆ ಮಾಡಬಹುದು. ಅದರಲ್ಲೂ ಹೆಣ್ಣುಮಕ್ಕಳಿಗೆ ಇದು ಅವಶ್ಯಕ. ದೇಶದ, ರಾಜ್ಯದ ಹಲವಡೆ ಪ್ರತಿನಿತ್ಯ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ವರದಿಯಾಗುತ್ತಲೆ ಇರುತ್ತವೆ. ಹೆಣ್ಣುಮಕ್ಕಳ ಇಂತಹ ರಕ್ಷಣಾತ್ಮಕ ಕಲೆಯನ್ನು ಇನ್ನಷ್ಟು ಸಂಖ್ಯೆಯಲ್ಲಿ ಕಲಿಯಬೇಕು ಎಂದರು.

    ಕರಾಟೆಯಲ್ಲಿ ಭಟ್ಕಳದ ಪ್ರತಿಭೆಗಳು ಸಾಕಷ್ಟು ಸಾಧನೆ ಮೆರೆದಿದ್ದು, ನನ್ನ ಕ್ಷೇತ್ರದ 6 ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವದು ಸಂತಸದ ಸಂಗತಿ. ನಮ್ಮ ದೇಶ, ರಾಜ್ಯವನ್ನು ಪ್ರತಿನಿಧಿಸುವ ಅವರಿಗೆ ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು. ಭಟ್ಕಳದಲ್ಲಿ ಕರಾಟೆ ಇನ್ಸಿಟಿಟ್ಯೂಟ್ ಆರಂಭಿಸಿದ ವಾಸು ನಾಯ್ಕ ಅವರನ್ನು ಸ್ಮರಿಸಿದ ಸಚಿವರು, ಅವರಿಂದಲೇ ಭಟ್ಕಳದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಕರಾಟೆ ಕಲಿತು ಇತರರಿಗೂ ಮಾಗದರ್ಶನ ನೀಡುತ್ತಿದ್ದಾರೆ ಎಂದರು.

    ಎಲ್​ಐಸಿ ಭಟ್ಕಳದ ಶಾಖಾಧಿಕಾರಿ ಗುರುದಾಸ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗ್ರೆ ಗ್ರಾಪಂ ಉಪಾಧ್ಯಕ್ಷ ಗೋವಿಂದ ನಾಯ್ಕ, ಪತ್ರಕರ್ತ ವಿಷ್ಣು ದೇವಾಡಿಗ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ಗಣ್ಯರಾದ ತಿಮ್ಮಪ್ಪ ಹೊನ್ನಿಮನೆ, ಎಸ್.ಪಿ. ಹಂದೆ, ಹನ್ಸಿ ರಾಜನ್, ಕಿರಣ ಶ್ಯಾನಭಾಗ, ವಿಠಲ ನಾಯ್ಕ, ಮಂಜುನಾಥ ದೇವಾಡಿಗ, ವಿಶಾಲ ನಾಯ್ಕ, ರವಿ ಶಾಲಿಯಾನ, ಸಾಗರ ಜಾಧವ, ಶ್ರೀಧರ ಭೈರುಮನೆ, ಉಮೇಶ ಮೊಗೇರ, ಇತರರು ಉಪಸ್ಥಿತರಿದ್ದರು.

    ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ, ಯಿನ್-ಯಾಂಗ್ ಇಂಟರ್​ನ್ಯಾಷನಲ್ ಮಾರ್ಷಲ್ ಆಟರ್Õ ಹಾಗೂ ಕರಾಟೆ ಡೂ ಇಂಡಿಯಾ (ರಿ) ಆಶ್ರಯದಲ್ಲಿ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯನ್ನು ನಾಗರಾಜ ದೇವಾಡಿಗ, ಅಶೋಕ ನಾಯ್ಕ, ಪ್ರವೀಣ, ವೆಂಕಟೇಶ ಮೊಗೇರ, ಇತರರು ಸಂಘಟಿಸಿದ್ದರು. ವಿವಿಧ ಜಿಲ್ಲೆಗಳ ಸಹಸ್ರಾರು ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts