ಹತ್ಯೆಗೂ ಮುನ್ನ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಮುಂದೆ ಹಂತಕರ ಹೈಡ್ರಾಮ ಹೀಗಿತ್ತು…

blank

ಹುಬ್ಬಳ್ಳಿ: ಇಂದು ಹಾಡಹಗಲೇ ನಗರದ ಪ್ರಸಿಡೆಂಟ್​ ಹೋಟೆಲ್​ನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನ ದುಷ್ಕರ್ಮಿಗಳಿಬ್ಬರು ಭೀಕರವಾಗಿ ಹತ್ಯೆ ಮಾಡಿದ್ದು, ಸಿಸಿಟಿವಿಯ ದೃಶ್ಯಾವಳಿ ನೋಡಿ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ವಾಸ್ತು ಗುರೂಜಿ ಅವರ ಕೊಲೆಗೂ ಮುನ್ನ ಹಂತಕರಿಬ್ಬರು ನಡೆಸಿದ ಹೈಡ್ರಾಮವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳವಾರ ಬೆಳಗ್ಗೆ ಪ್ರಸಿಡೆಂಟ್​ ಹೋಟೆಲ್​ನ ರಿಸೆಪ್ಶನ್​ನಲ್ಲಿ ಭಕ್ತರ ಸೋಗಿನಲ್ಲಿ ಯುವಕರಿಬ್ಬರು ಕುಳಿತಿದ್ದರು. ಚಂದ್ರಶೇಖರ ಗುರೂಜಿ ಅವರು ಆಗಮಿಸುತ್ತಿದ್ದಂತೆ ಎದ್ದು ಯುವಕರಿಬ್ಬರು ನಿಂತರು. ಗುರೂಜಿ ಅವರು ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಇಬ್ಬರೂ ಸಮೀಪಕ್ಕೆ ಆಗಮಿಸಿದ್ದಾರೆ. ಒಬ್ಬ ಗುರೂಜಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಮೇಲಕ್ಕೆ ಏಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಮತ್ತೊಬ್ಬ ಗುರೂಜಿಗೆ ಚಾಕುವಿನಿಂದ ಹಿರಿದಿದ್ದಾನೆ. ಏನಾಗ್ತಿದೆ ಎಂದು ಅರಿಯುವಷ್ಟರಲ್ಲಿ ಇಬ್ಬರೂ ಗುರೂಜಿಯನ್ನ ರಿಸೆಪ್ಶನ್​ನಲ್ಲೇ ಅಟ್ಟಾಡಿಸಿಕೊಂಡು 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಿರಿದು ಕೊಂದಿದ್ದಾರೆ. ಬಳಿಕ ಚಾಕು ಹಿಡಿದುಕೊಂಡೇ ಹೋಟೆಲ್​ನಿಂದ ಹೊರ ಓಡಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಕೆಲವರು ಭಯದಿಂದ ದೂರ ಓಡಿದ್ದಾರೆ.

ಹೋಟೆಲ್‌ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಿಡಿಸಿಕೊಳ್ಳಲು ಬಂದರೂ ಅವರಿಗೂ ಬೆದರಿಸಿದ ಹಂತಕರು, ಸ್ಥಳದಲ್ಲೇ ಮೃತಪಡುವವರೆಗೂ ಗುರೂಜಿಗೆ ಚುಚ್ಚಿ ಚುಚ್ಚಿ ಕೊಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡು ದಿನಗಳಿಂದ ಚಂದ್ರಶೇಖರ ಗುರೂಜಿ ಅವರು ಹುಬ್ಬಳ್ಳಿಯ ಉಣಕಲ್​ನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಭಕ್ತರ ಸೋಗಿನಲ್ಲಿ ಯುವಕರಿಬ್ಬರು ಗುರೂಜಿ ಅವರನ್ನ ಭೇಟಿಯಾಗಲು ಬಂದಿದ್ದರು. ಅವರೇ ಗುರೂಜಿಯನ್ನ ಕೊಂದಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನವೊಂದು ಹಂತಕರ ಜಾಡು ಹಿಡಿದು ಹೊರಟಿರುವುದು ಭಾರೀ ಕುತೂಹಲ ಮೂಡಿಸಿದೆ.

ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ ಗಂಡನಿಂದಲೇ ಚಂದ್ರಶೇಖರ ಗುರೂಜಿ ಹತ್ಯೆ! ಬಯಲಾಗ್ತಿದೆ ಒಂದೊಂದೇ ರಹಸ್ಯ

ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಕೊಲೆ: ಬೆಚ್ಚಿಬಿದ್ದ ಹುಬ್ಬಳ್ಳಿ ಜನತೆ

ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡ್ಬೇಡಿ… ಸುಳ್ಳು ಹೇಳಿ ಜನರಿಗೆ ಮೋಸ ಮಾಡ್ತಿದ್ದಾನೆ: ಮಾಜಿ ಶಾಸಕ ಮನವಿ

ನನಗೆ ಮೊದಲು ಡಾನ್ಸ್ ಹವ್ಯಾಸವಿತ್ತು… ಆದರೀಗ ಬೇರೆಯವರನ್ನ ಕುಣಿಸುವೆ, ನಾನು ಕುಣಿಯಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Share This Article

ನೀವು ಅಡುಗೆಗೆ ಪಾಮ್​ ಆಯಿಲ್​ ಬಳಸುತ್ತಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು! Palm Oil

Palm Oil : ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಕಡಲೆ ಎಣ್ಣೆ, ಸೂರ್ಯಕಾಂತಿ…

Relationship Tips : ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುತ್ತಿದ್ದೀರಾ? ಈ ರೀತಿಯಲ್ಲಿ ನಿಮ್ಮ ಸಂಬಂಧ ಗಟ್ಟಿ ಮಾಡಿಕೊಳ್ಳಿ…

Relationship Tips : ಪತಿ-ಪತ್ನಿಯರ ನಡುವಿನ ಸಣ್ಣ ಜಗಳಗಳು ಸಮಯದೊಂದಿಗೆ ಪರಿಹರಿಸಲ್ಪಡುತ್ತವೆ, ಇಲ್ಲದಿದ್ದರೆ ಕೆಲವೊಮ್ಮೆ ಉದ್ವಿಗ್ನತೆ…

ಬೇಯಿಸಿದ ಮೊಟ್ಟೆ vs ಆಮ್ಲೆಟ್​… ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Omelette vs Boiled Egg

Omelette vs Boiled Egg : ಮೊಟ್ಟೆಗಳು ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ಪ್ರಮುಖ ಪೋಷಕಾಂಶಗಳ…