More

    ರಾಮಭಕ್ತರಿಗೆ ಕೂಡಿಬಂದ ಸುಯೋಗ, ಮಂತ್ರಾಕ್ಷತೆಯ ಭವ್ಯ ಮೆರವಣಿಗೆ

    ಕುಂದಗೋಳ: ರಾಮ ಮಂದಿರ ನಿರ್ವಣಕ್ಕಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದ ಭಕ್ತರಿಗೆ ಇದೀಗ ಸುಯೋಗ ಕೂಡಿ ಬಂದಿದೆ. ಇದು ರಾಮಭಕ್ತರಿಗೆ ಸಂತಸದ ವಿಷಯವಾಗಿದೆ ಎಂದು ಪಟ್ಟಣದ ಕಲ್ಯಾಣಪುರದ ಬಸವಣ್ಣಜ್ಜನವರು ಹೇಳಿದರು.

    ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಮಠದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್ ಹಾಗೂ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಆರ್​ಎಸ್​ಎಸ್ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಧರ ನಾಡಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಯಾಗುತ್ತಿರುವುದು ಅವಿಸ್ಮರಣೀಯ ಕ್ಷಣವಾಗಿದೆ. ಇದು ಸರ್ವ-ಧರ್ಮದವರ ಗೆಲುವು ಎಮದು ವಿಶ್ಲೇಷಿಸಬಹುದು. ರಾಮಮಂದಿರ ನಿರ್ವಣವಾಗಿದ್ದು ಮೊದಲ ಮೆಟ್ಟಿಲು. ಇನ್ನೂ ಅನೇಕ ಮೆಟ್ಟಿಲುಗಳು ನಿರ್ವಣವಾಗಬೇಕಾಗಿದೆ ಎಂದು ಮಾರ್ವಿುಕವಾಗಿ ಹೇಳಿದರು.

    ಬೆಳಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಬಂದ ಮಂತ್ರಾಕ್ಷತೆಯ ಮೆರವಣಿಗೆಯು ಪಟ್ಟಣದ ಶಿವಾಜಿ ನಗರ ಕಿಲ್ಲಾ ಓಣಿಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಶಾಸಕ ಎಂ.ಆರ್. ಪಾಟೀಲ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

    ಹಿರೇಮಠದ ಶಿತಿಕಂಠೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಲ್ಯಾಣಪುರದ ಬಸವಣ್ಣಜ್ಜನವರು, ಶಿವಾನಂದ ಮಠದ ಮಹಾಂತ ಶ್ರೀಗಳು ಇದ್ದರು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ, ಮಕ್ಕಳು ಶ್ರೀರಾಮ ಹಾಗೂ ಹನುಮಂತನ ವೇಷ ಧರಿಸಿ ಗಮನ ಸೆಳೆದರು.

    ಬಸವರಾಜ ಕೊಪ್ಪದ, ಶ್ರೀಕಾಂತ ಕಲಾಲ, ನಾಗರಾಜ ದೇಶಪಾಂಡೆ, ಪೃಥ್ವಿ ಕಾಳೆ, ಬಿ.ಟಿ. ಗಂಗಾಯಿ, ನಾಗನಗೌಡ ಸಾತ್ಮಾರ, ರವಿಗೌಡ ಪಾಟೀಲ, ಮಾಲತೇಶ ಶ್ಯಾಗೋಟಿ, ಪಕ್ಕಜ್ಜ ಕೋರಿ, ಪ್ರಕಾಶ ಕೂಬಿಹಾಳ, ವಿನಾಯಕ ಕುಲಕರ್ಣಿ, ಬಸವರಾಜ ನಾವಳ್ಳಿ, ಶಂಕರ ವಡಕಣ್ಣವರ, ರಾಘವೇಂದ್ರ ಪಾಟೀಲ, ಸುಭಾಸ ಸಾಧರ, ನಾಗರಾಜ ಸುಭರಗಟ್ಟಿ, ಪ್ರಕಾಶ ಕೋಕಾಟೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts