More

    ಮಳೆಯಿಂದ ಕಾಂಪೌಂಡ್ ಕುಸಿದು ಮೇಕೆ ಸಾವು

    ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ಜಾಗಿನಕೆರೆ ಗ್ರಾಮದಲ್ಲಿ ಮಳೆ ಕಾರಣದಿಂದಾಗಿ ಮನೆ ಕಾಂಪೌಂಡ್ ಕುಸಿದ ಪರಿಣಾಮ ಮೇಕೆ ಮೇಲೆ ಬಿದ್ದು ಬುಧವಾರ ರಾತ್ರಿ ಮೃತಪಟ್ಟಿದೆ.

    ಗ್ರಾಮದ ಸುಬ್ಬೇಗೌಡರ ಮಗ ಪ್ರಕಾಶ್ ಎಂಬುವರಿಗೆ ಸೇರಿದ ಮೇಕೆ ಮೃತಪಟ್ಟಿದೆ. ರಾತ್ರಿ ಭಾರೀ ಮಳೆ ಕಾರಣದಿಂದಾಗಿ ಮನೆ ಕಾಂಪೌಂಡ್ ಕುಸಿದು ಮೇಕೆ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದೆ. ರೈತನಿಗೆ ಸುಮಾರು ಹತ್ತು ಸಾವಿರ ರೂ. ನಷ್ಟವಾಗಿದೆ. ಸ್ಥಳಕ್ಕೆ ಗ್ರಾಪಂ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರೈತನು ಪರಿಹಾರಕ್ಕೆ ಮನವಿ ಮಾಡಿದಾಗ ನೀಡುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts