ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

2 Min Read

ಹನೂರು: ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಕೌರ್ಯದ ದೃಶ್ಯಕ್ಕೆ ಮಾದೇಶ್ವರ ಸ್ವಾಮಿ ಕುರಿತ ಜನಪದ ಹಾಡು ಬಳಕೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೊಲೆ ದೃಶ್ಯಕ್ಕೆ ಮಹದೇಶ್ವರ ಸ್ವಾಮಿ ಕುರಿತು ಜನಪದ ಹಾಡನ್ನು ಏಕೆ ಬಳಸಿದ್ದಾರೆ? ವಿಕೃತ ಮೆರೆಯುವ ದೃಶ್ಯಕ್ಕೆ ಮಹದೇಶ್ವರನ ಜನಪದ ಹಾಡು ಬಳಕೆ ಅಕ್ಷಮ್ಯ ಎಂದು ಖಂಡಿಸಿದ್ದಾರೆ.

ರಾಜೇಶ್​ ಬಿ. ಶೆಟ್ಟಿ ನಿರ್ದೇಶನ ಮಾಡಿರುವ ಮತ್ತು ನಾಯಕರಾಗಿ ಅಭಿನಯಿಸಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ‘ಸೋಜುಗಾದ ಸೂಜು ಮಲ್ಲಿಗೆ…’ ಜನಪದ ಹಾಡನ್ನು ಬಳಸಲಾಗಿದೆ. ಇದು ವಿವಾದ ಸೃಷ್ಟಿಸಿದೆ. ಜನಪದಕ್ಕೆ ತನ್ನದೇ ಆದ ಅಸ್ಮಿತೆ ಇದೆ, ಸೌಂದರ್ಯ ಇದೆ. ಚಿತ್ರದ ನಿರ್ದೇಶಕರು ಜನಪದದ ಆಶಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ದೈವಿಕ ಜನಪದ ಗೀತೆಯನ್ನು ಕೊಲೆ ದೃಶ್ಯಕ್ಕೆ ಬಳಸಿಕೊಳ್ಳಬಹುದೇ? ಜನಪದ ಅಂದಾಕ್ಷಣ ಯಾರು ಯಾವುದಕ್ಕಾದರೂ ಬಳಸಿಕೊಳ್ಳಬಹುದೇ? ಎಂದು ಸಾಮಾಜಿಕ ಜಾಲತಾಣಗಳಲ್ಲೂ ಮಹದೇಶ್ವರ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ವಿವಾದದ ಸುಳಿಯಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿರುವ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಈ ಭಾಗದ ಮಲೆ ಮಾದಪ್ಪ ಎಲ್ಲರ ಆರಾಧ್ಯ ದೈವ. ಶ್ರೀಶೈಲದಿಂದ ಬಂದ ಮಹದೇಶ್ವರರು ಜನರ ಭಾವನೆಗಳನ್ನು ಅರಿತು ಶಾಂತಿಯುತ ಬದಕನ್ನು ಕಟ್ಟಿಕೊಡಲು ಗಡಿಭಾಗಕ್ಕೆ ಬಂದವರು. ಇವರನ್ನು ಅಪಾರ ಸಂಖ್ಯೆಯ ಭಕ್ತರು ಶಾಂತಿಧೂತ, ಏಳುಮಲೆಯ ಒಡೆಯ, ಮಾಯ್ಕರ, ಮುದ್ದುಮಾದೇವ ಎಂದು ಕೊಂಡಾಡುತ್ತಾರೆ. ಮಹದೇಶ್ವರರ ಭಕ್ತಿಭಾವ ಸೂಚಿಸುವ ದೃಶ್ಯಕ್ಕೆ ಜನಪದ ಗೀತೆಯಾಗಿ ಬಳಸದೆ ವಿಕೃತಿ ಮೆರೆಯುವ ಸನ್ನಿವೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಮಾದೇಶ್ವರ ಸ್ವಾಮಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ವಿವಾದದ ಸುಳಿಯಲ್ಲಿ 'ಗರುಡ ಗಮನ ವೃಷಭ ವಾಹನ' ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

ಮಹದೇಶ್ವರಸ್ವಾಮಿಯ ಪುಣ್ಯ ಕೇತ್ರ ಹೊಂದಿರುವ ಭಾಗದಲ್ಲಿ ನಟ, ನಿದೇರ್ಶಕ ಎಸ್. ಮಹೇಂದ್ರ ಪ್ರತಿಕ್ರಿಯಿಸಿ, ಶಾಂತಿಧೂತ, ಶಾಂತಿಮಂತ್ರ ಗೀತೆಗಳನ್ನು ವಿಕೃತಿ ಮೆರೆಯುವ ಸನ್ನಿವೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ. ಗೊತ್ತಿದ್ದೋ, ಗೊತ್ತಿಲ್ಲದೆ ಮಾಡಿದ್ದಾರೋ ಏನೋ. ಆದರೆ ಏನೆ ಮಾಡಲಿ ಅದರ ಹಿನ್ನೆಲೆ, ಪರಂಪರೆ ಹಾಗೂ ಇತಿಹಾಸವನ್ನು ಅರಿಯವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು. 

ಕೌರ್ಯದ ದೃಶ್ಯಕ್ಕೆ ‘ಸೋಜುಗಾದ ಸೂಜು ಮಲ್ಲಿಗೆ…’ ಹಾಡು ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಕೆಲವರು ಪರವಾಗಿಯೂ ಕಮೆಂಟ್​ ಮಾಡುತ್ತಿದ್ದಾರೆ.  

ಸ್ಕೂಟಿ ನಂಬರ್​ ಪ್ಲೇಟ್​ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು

ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

ಮೈಸೂರಲ್ಲಿ ಆಸ್ತಿಗಾಗಿ ಶವದ ಹೆಬ್ಬೆಟ್ಟು ಒತ್ತಿಸಿಕೊಂಡ್ರು: ಗಂಡ ಬದುಕಿಲ್ಲ, ಮಕ್ಕಳೂ ಇಲ್ಲ… ಅಸಲಿ ಕತೆ ಇಲ್ಲಿದೆ

ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

Share This Article