More

    ಸ್ಮಶಾನಕ್ಕೆ ಸಾಗಿಸುತ್ತಿದ್ದ ಶವವನ್ನು ಚಟ್ಟದಿಂದ ಕೆಳಗಿಳಿಸಿ ಶಿವಮೊಗ್ಗದ ಆಸ್ಪತ್ರೆಗೆ ರವಾನೆ! ಅಂತ್ಯಕ್ರಿಯೆಗೆ ಬಂದ ಗ್ರಾಮಸ್ಥರಿಗೆ ಶಾಕ್​

    ಶಿವಮೊಗ್ಗ: ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದರು. ಮಾರ್ಗಮಧ್ಯೆ ಎದುರಾದ ಪೊಲೀಸರು ಶವವನ್ನು ಚಟ್ಟದಿಂದ ಕೆಳಗಿಳಿಸಿ ಆಸ್ಪತ್ರೆಗೆ ತೆಗೆದುಕೊಂಡು ಹೋದ ಘಟನೆ ಬುಧವಾರ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದ ಸಮೀಪದ ಮಾರುತಿ ಕ್ಯಾಂಪ್‌ನಲ್ಲಿ ನಡೆದಿದೆ. ಈ ಬೆಳವಣಿಗೆ ಅಂತ್ಯಕ್ರಿಯೆಗೆ ಬಂದ ಗ್ರಾಮಸ್ಥರಲ್ಲಿ ಕೆಲಕೆಲ ಆತಂಕ ಮೂಡಿಸಿತ್ತು.

    ಮಾರುತಿ ಕ್ಯಾಂಪ್‌ನ ವಿಠ್ಠಲ ಮೃತ ದುರ್ದೈವಿ. ವಿಠ್ಠಲ ಮತ್ತು ಈತನ ಸ್ನೇಹಿತ ಇಬ್ಬರೂ ಬುಧವಾರ ಬೆಳಗ್ಗೆ ಲಕ್ಕಿನಕೊಪ್ಪ ಕಾಡಿಗೆ ತೆರಳಿದ್ದರು. ಆದರೆ ವಿಠ್ಠಲ ವಾಪಸ್​ ಬಾರಲಿಲ್ಲ. ಕಾಡಿನಲ್ಲೇ ಶವವಾಗಿದ್ದ. ಸುದ್ದಿ ತಿಳಿದ ಗ್ರಾಮಸ್ಥರು ವಿಠ್ಠಲನ ಮೃತದೇಹವನ್ನ ಗ್ರಾಮಕ್ಕೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಮತ್ತೊಂದು ತಿರುವು ಪಡೆದಿದೆ.

    ಕಾಡಿಗೆ ತೆರಳಿದ್ದ ವಿಠ್ಠಲ ಮತ್ತು ಈತನ ಸ್ನೇಹಿತ ಇಬ್ಬರೂ ಕಂಠಪೂರ್ತಿ ಮದ್ಯ ಕುಡಿದು ಅಲ್ಲೆ ಮಲಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ವಿಠ್ಠಲನ ಸ್ನೇಹಿತ ಅಲ್ಲಿಂದ ಎದ್ದು ಬಂದಿದ್ದಾನೆ. ಆದರೆ ವಿಠ್ಠಲ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾನೆ. ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠ್ಠಲನ ಶವ ಪತ್ತೆಯಾಗಿದೆ. ಆತನ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದು ಕುಟುಂಬಸ್ಥರು ಕೂಡ ಬಂದು ಅತಿಯಾಗಿ ಕುಡಿತದಿಂದ ಸಾವನ್ನಪ್ಪಿರಬಹುದೆಂದು ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರೊಂದಿಗೆ ಸಿದ್ಧತೆ ಮಾಡಿಕೊಂಡಿದ್ದರು. ಶವವನ್ನು ಚಟ್ಟದ ಮೇಲೆ ಮಲಗಿಸಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು.

    ಅಷ್ಟರಲ್ಲಿ ಗ್ರಾಮಸ್ಥರೊಬ್ಬರು ವಿಠ್ಠಲನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಂಗಾನಗರ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಸಂಸ್ಕಾರ ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರುಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಿದ್ದಾರೆ.

    ಕೆಎಸ್ಸಾರ್ಟಿಸಿ ಬಸ್​-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

    ಚಂದ್ರಶೇಖರ ಗುರೂಜಿ ಹಂತಕರ ಬಂಧನ: ಅಸಲಿ ವಿಚಾರ ಮುಚ್ಚಿಟ್ರಾ ಪೊಲೀಸರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts