More

  ಸದಾಶಿವಗಡದಲ್ಲಿ ಸಿದ್ಧವಾಯ್ತು ತೇಲುವ ಜಟ್ಟಿ

  ಸುಭಾಸ ಧೂಪದಹೊಂಡ ಕಾರವಾರ
  ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ (ಐಡಬ್ಲುಎಐ)ನೆರವಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲ್ಲಿನ ಸದಾಶಿವಗಡ ಬಳಿ ಕಾಳಿ ನದಿಯಲ್ಲಿ ಕಾಂಕ್ರಿಟ್ ಹಾಗೂ ಪಾಲಿಸ್ಟರೈನ್​ನಿಂದ ತಯಾರಿಸಲಾದ ತೇಲುವ ಜಟ್ಟಿಯನ್ನು ಅಳವಡಿಸಲಾಗಿದೆ.
  ಇದುವರೆಗೆ ರಾಜ್ಯ ಕರಾವಳಿಯಲ್ಲಿ ಸಿಂಥೆಟಿಕ್​ನಿಂದ ತಯಾರಿಸಿದ ತೇಲುವ ಜಟ್ಟಿಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಅಲೆಗಳ ಏರಿಳಿತಕ್ಕೆ ಅನುಗುಣವಾಗಿ ಅದೂ ಹೊಯ್ದಾಡುತ್ತಿತ್ತು. ಗೋವಾ ಭಾಗದಲ್ಲಿ ಈಗಾಗಲೇ ನಿರ್ವಿುಸಲಾಗಿರುವ ಉಪ್ಪು ನೀರು, ಗಾಳಿ, ಮಳೆಗೆ ಶೀಘ್ರದಲ್ಲಿ ತುಕ್ಕು ಹಿಡಿಯದ ಆಧುನಿಕ ಸ್ವರೂಪದ ತೇಲುವ ಜಟ್ಟಿಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ನಿರ್ವಿುಸಲಾಗಿದೆ.
  2020ರ ರಾಜ್ಯ ಬಜೆಟ್​ನಲ್ಲಿ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಳಿ, ಶರಾವತಿ, ಗುರುಪುರ, ಹಂಗಾರಕಟ್ಟೆ ಹಾಗೂ ನೇತ್ರಾವತಿಯಲ್ಲಿ ಐಡಬ್ಲುಎಐ ನೆರವಿನಲ್ಲಿ ಜಲಸಾರಿಗೆ ಮಾರ್ಗಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಕೇಂದ್ರ ಐಡಬ್ಲುಎಐ ಸಂಪೂರ್ಣ ಸಮೀಕ್ಷೆ ನಡೆಸಿ ಡಿಪಿಆರ್ ತಯಾರಿಸಲಾಗಿತ್ತು. ರಾಜ್ಯದಲ್ಲಿ ಒಟ್ಟು 11 ತೇಲುವ ಜಟ್ಟಿಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ಕಾಳಿ ನದಿಯಲ್ಲಿ ಸದಾಶಿವಗಡ ಹಾಗೂ ಕಾಳಿ ಮಾತಾ ದೇವಸ್ಥಾನ ಎರಡೂ ಸೇರಿದೆ.
  ಕಾಳಿ ನದಿಯಲ್ಲಿ 2.54 ಕೋಟಿ ರೂ. ವೆಚ್ಚದಲ್ಲಿ ಎರಡು ಫ್ಲೋಟಿಂಗ್ ಜಟ್ಟಿಗಳು, ಮತ್ತು 0.14 ಕೋಟಿ ರೂ. ವೆಚ್ಚದಲ್ಲಿ ನೇವಿಗೇಶನಲ್ ಉಪಕರಣಗಳನ್ನು ಅಳವಡಿಸಲು ಕೇಂದ್ರ ಒಳನಾಡು ಜಲಸಾರಿಗೆ ಪ್ರಾಧಿಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಬಂದರು, ಒಳನಾಡು ಜಲಸಾರಿಗೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಟೆಂಡರ್ ಪಡೆದು, ಮುಂಬೈನ ಮರೈನ್​ಟೆಕ್ ಇಂಡಿಯಾ ಸರ್ವೀಸ್ ಪ್ರೖೆ.ಲಿ. ಮೊದಲ ಹಂತದಲ್ಲಿ ಸದಾಶಿವಗಡದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಕಟ್ಟಡದ ಸಮೀಪ ತೇಲುವ ಜಟ್ಟಿ ನಿರ್ವಿುಸಿದೆ.
  ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಜಟ್ಟಿ ನಿರ್ವಿುಸಲಾಗಿದ್ದು, ಅದಕ್ಕೆ ತೆರಳಲು ಅಲ್ಯೂಮೀನಿಯಂನ ಪಾದಚಾರಿ ಮಾರ್ಗವನ್ನು ನಿರ್ವಿುಸಲಾಗಿದೆ. ದೋಣಿಗಳನ್ನು ತಂದು ನಿಲ್ಲಿಸಿ ಜನರನ್ನು ಇಳಿಸಲು ಅನುಕೂಲವಾಗುವಂತಿದೆ. ಕಾಳಿ ಮಾತಾ ದ್ವೀಪದ ಸಮೀಪ ಇನ್ನೊಂದು ತೇಲುವ ಜಟ್ಟಿಗೆ ಅನುಮೋದನೆ ದೊರೆತಿದ್ದು, ಸಿಆರ್​ಜಡ್ ಅನುಮತಿಗಾಗಿ ಕಾಯಲಾಗುತ್ತಿದೆ. ಶೀಘ್ರದಲ್ಲಿ ಅಲ್ಲೂ ಜಟ್ಟಿ ನಿರ್ವಣವಾಗಲಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts