More

    ಅತಂತ್ರ ಸ್ಥಿತಿಯಲ್ಲಿ “ಮಹಾ” ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?

    ಗುವಾಹಟಿ: ಮಹಾರಾಷ್ಟ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿರುವ ರೆಬೆಲ್​ ಶಾಸಕರು ಉಳಿದುಕೊಂಡಿರುವ ಹೋಟೆಲ್​ ಹಾಗೂ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

    ಸೂರತ್​ನಿಂದ ಗುವಾಹಟಿಗೆ ತೆರಳಿರುವ ರೆಬೆಲ್​ ಶಾಸಕರ ಗುವಾಹಟಿಯ ಐಷಾರಾಮಿ ಹೋಟೆಲ್​ನಲ್ಲಿ ಉಳಿದುಕೊಂಡಿರುವುದು ಗೊತ್ತಿರುವ ವಿಚಾರವೇ, ಆದರೆ ಈ ಹೋಟೆಲ್​ನಲ್ಲಿ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಕೇಳಿದ್ರೇ ನಿಜಕ್ಕೂ ಬೆರಗಾಗ್ತೀರಾ.

    ಒಟ್ಟು 70 ಕೊಠಡಿಗಳಲ್ಲಿ ರೆಬೆಲ್​ ಶಾಸಕರಿದ್ದು, ಕೇವಲ 7 ದಿನಕ್ಕೆ 56 ಲಕ್ಷ ರೂ. ಖರ್ಚಾಗಿದ್ದು, ಇತರೆ ವೆಚ್ಚ 8 ಲಕ್ಷ ರೂ. ಸೇರಿ ಒಟ್ಟು 64 ಲಕ್ಷ ರೂ. ವೆಚ್ಚಾಗಿದೆ ಎನ್ನಲಾಗಿದೆ.ಶಾಸಕರು ಹಾಗೂ ಅವರ ಜತೆಗೆ ಆಗಮಿಸುವವರಿಗೂ ಸೇರಿ ಬರೋಬ್ಬರಿ 70 ಕೊಠಡಿಗಳನ್ನು ಇಲ್ಲಿ ಬುಕ್​ ಮಾಡಲಾಗಿದೆ. ಇದು ಕೇವಲ ಹೋಟೆಲ್​​ ವೆಚ್ಚವಾದರೆ, ಅವರ ಪ್ರಯಾಣ ವೆಚ್ಚ ಬೇರೆಯೇ ಇದೆ.

    ಅತಂತ್ರ ಸ್ಥಿತಿಯಲ್ಲಿ "ಮಹಾ" ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?

    ಸದ್ಯ ರೆಬೆಲ್​ ನಾಯಕ ಏಕನಾಥ್​ ಶಿಂಧೆ ಅವರೊಂದಿಗೆ 40 ಶಾಸಕರಿದ್ದು, ಸ್ವತಂತ್ರ ಅಭ್ಯರ್ಥಿಗಳು ಕೂಡ ಇವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇತ್ತ ಶಿವಸೇನೆ ಎನ್​ಸಿಪಿ ಜತೆಗಿನ ಮೈತ್ರಿ ಮುರಿದುಬೀಳುವ ಹಂತದಲ್ಲಿದ್ದು, ಸದ್ಯ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts