More

    ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋದ ರೈತ ಸಜೀವ ದಹನ: ಹಾವೇರಿಯಲ್ಲಿ ದುರಂತ

    ಹಾವೇರಿ: ಸಾವು ಯಾವಾಗ? ಹೇಗೆ ಬರುತ್ತೆ? ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ರೈತನೇ ಸಜೀವ ದಹನಗೊಂಡಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇಂತಹ ದುರ್ಘಟನೆ ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ರೈತ ಬಾಬುಸಾಬ ರಾಜೆಸಾಬ ನದಾಪ್(50) ಮೃತರು. ಇವರು ಒಂದೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಬುಧವಾರ ಸಂಜೆ ಕಬ್ಬಿನ ಗದ್ದಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇದನ್ನು ಕಂಡ ರೈತ, ತಾನು ಕಷ್ಟಪಟ್ಟು ಬೆಳೆದ ಕಬ್ಬನ್ನು ಉಳಿಸಿಕೊಳ್ಳಲು ಬೆಂಕಿ ನಂದಿಸಲು ಹೋಗಿದ್ದರು.

    ಈ ವೇಳೆ ರೈತನೂ ಕಬ್ಬಿನ ಗದ್ದೆಯಲ್ಲೇ ಸುಟ್ಟುಕರಕಲಾಗಿ, ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​, ಹಾವೇರಿ)

    ಶ್ರೀಶೈಲದಲ್ಲಿ ಸ್ಥಳೀಯರು-ಕನ್ನಡಿಗ ಯಾತ್ರಿಗಳ ನಡುವೆ ಗಲಾಟೆ: 200 ವಾಹನ ಜಖಂ

    ಕಾರನ್ನು ಓವರ್​ಟೇಕ್​ ಮಾಡಿದ್ದಕ್ಕೆ ಹಲ್ಲೆ: ಹೆಲ್ಪ್​ಲೈನ್​ಗೆ ಕರೆ ಮಾಡಿದ್ರೂ ಸ್ಪಂದಿಸಲಿಲ್ಲ… ವಿಡಿಯೋ ಮೂಲಕ ಮಹಿಳೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts