More

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಮಂಡ್ಯ: ಆ ಮನೆಯ ಮಗ ಕೋವಿಡ್​ಗೆ ಬಲಿಯಾಗಿದ್ದ. ಮೃತನ ತಂದೆ-ತಾಯಿಗೆ ಮಗನ ಸಾವಿನ ಸುದ್ದಿ ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದನ್ನ ಅರಿತ ಸಂಬಂಧಿಕರು ಅವಗೆ ಗೊತ್ತಾಗದಂತೆ ತಾವೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿ ಬಂದಿದ್ದರು. ಇದಾದ ಮೂರು ಎರಡು ದಿನಕ್ಕೆ ಅದ್ಯಾರಿಂದಲೋ ಆ ಹಿರಿಜೀವಗಳಿಗೆ ಮಗ ಬದುಕಿಲ್ಲ ಎಂಬ ಸತ್ಯ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲೇ ತಂದೆ-ತಾಯಿ ಇಬ್ಬರೂ ಪ್ರಾಣಬಿಟ್ಟಿದ್ದಾರೆ.

    ಇಂತಹ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮಗನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ದಂಪತಿ ಕೆಂಪಾಚಾರಿ (84) ಮತ್ತು ಜಯಮ್ಮ (74). ಇತ್ತೀಚಿಗೆ ಇವರ ಮಗ 54 ವರ್ಷದ ತಮ್ಮಯ್ಯಚಾರಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಕರೊನಾ ಟೆಸ್ಟ್ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೇ 1ರಂದು ಮೃತಪಟ್ಟಿದ್ದರು. ಈ ವಿಷಯವನ್ನ ಸಂಬಂಧಿಕರು ಕೆಂಪಚಾರಿ ಮತ್ತು ಜಯಮ್ಮ ದಂಪತಿಗೆ ತಿಳಿಸಿರಲಿಲ್ಲ.

    ಮಗ ಸತ್ತಿದ್ದರೂ ಬದುಕಿದ್ದಾರೆ ಎಂದು ಮುಚ್ಚಿಡುವುದಾದರೂ ಹೇಗೆ ಎಂದು ಯೋಚಿಸಿದ ಕೆಲ ಸಂಬಂಧಿಗಳು ನಿನ್ನೆ(ಸೋಮವಾರ) ಈ ವಿಷಯವನ್ನ ವೃದ್ಧ ತಂದೆ-ತಾಯಿಗೆ ತಿಳಿಸಿದರು. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದ ಆಘಾತಕ್ಕೀಡಾದ ತಾಯಿ ಜಯಮ್ಮ ಕೊನೆಯುಸಿರೆಳೆದರು. ಇದಾದ ಕೆಲವೇ ಕ್ಷಣದಲ್ಲಿ ತಂದೆ ಕೆಂಪಾಚಾರಿಯೂ ಪ್ರಾಣಬಿಟ್ಟರು. ಈ ಘಟನೆ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ತರಿಸಿದೆ.

    ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಕರೊನಾಗೆ ದಂಪತಿ ಬಲಿ: ಸೋಂಕು ತಗುಲಿದ ಮೂರೇ ದಿನಕ್ಕೆ ದುರಂತ ಅಂತ್ಯ

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts