More

    ಹಾನಗಲ್ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನ

    ಬೆಂಗಳೂರು: ಮಾಜಿ ಸಚಿವ, ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಅವರು ಮಂಗಳವಾರ ಮಧ್ಯಾಹ್ನ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 85 ವರ್ಷದ ಸಿಎಂ ಉದಾಸಿ ಅವರನ್ನು 15 ದಿನಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದರು.

    ಸಾವಿತ್ರಮ್ಮ ಮತ್ತು ಮಹಾಲಿಂಗಪ್ಪ ಉದಾಸಿ ದಂಪತಿಯ ಮಗನಾಗಿ 1937ರ ಫೆ.2ರಂದು ಜನಿಸಿದ್ದ ಸಿಎಂ ಉದಾಸಿ(ಚನ್ನಬಸಪ್ಪ ಮಹಲಿಂಗಪ್ಪ ಉದಾಸಿ) ನಾಡು ಕಂಡ ವಿಶಿಷ್ಟ ರಾಜಕಾರಣಿ. ವಿದ್ಯಾರ್ಥಿಯಾಗಿದ್ದಾಗಲೇ ಹಾನಗಲ್ ತಾಲೂಕಿನ ಬಹುತೇಕ ಗ್ರಾಮಗಳ ಸಂತೆಯಲ್ಲಿ ಅಕ್ಕಿ ವ್ಯಾಪಾರ ಮಾಡುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ವ್ಯಕ್ತಿತ್ವಕ್ಕೆ ಮಾರುಹೋದ ಕೆಲವು ಹಿರಿಯರು ಬಲವಂತ ಮಾಡಿ 1974ರಲ್ಲಿ ಹಾನಗಲ್ಲ ಪುರಸಭೆ ಚುನಾವಣೆಗೆ ನಿಲ್ಲಿಸಿದ್ದರು. ಆ ಚುನಾವಣೆಯಲ್ಲಿ ಉದಾಸಿ ಗೆಲುವಿನ ನಗೆ ಬೀರಿದ್ದರು. ಅಂದಿನಿಂದ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡು ಬಂದಿದ್ದ ಸಿಎಂ ಉದಾಸಿ ಅವರು ‘ಅಣ್ಣಾವ್ರು’ ಎಂದೇ ಸ್ಥಳೀಯವಾಗಿ ಪ್ರಖ್ಯಾತಿ ಪಡೆದಿದ್ದರು. ಹಾನಗಲ್ ಸೇರಿದಂತೆ ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕನ್ನಡ, ಇಂಗ್ಲಿಷ್​, ಉರ್ದು, ಹಿಂದಿ, ಮರಾಠಿ, ಕೊಂಕಣಿ ಭಾಷೆಯನ್ನ ಕರಗತ ಮಾಡಿಕೊಂಡಿದ್ದರು.

    ಹಾನಗಲ್ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನ

    1983ರಲ್ಲಿ ಮೊದಲ ಭಾರಿ ವಿಧಾನಸಭೆ ಪ್ರವೇಶಿಸಿದ ಸಿಎಂ ಉದಾಸಿ, 1985ರಲ್ಲಿ ರಾಜ್ಯ ಸರ್ಕಾರದ ಲೆಕ್ಕಪತ್ರ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು. 1989ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 1990ರಲ್ಲಿ ಅಖಂಡ ಧಾರವಾಡ ಜಿಲ್ಲೆಯ ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಜೆ.ಎಚ್​ ಪಟೇಲರ ಮಂತ್ರಿಮಂಡಲದಲ್ಲಿ ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದರು. ಮತ್ತೆ 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2006ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂಧ ಸ್ಪರ್ಧಿಸಿ ಗೆಲುವಿನ ನಗೆಬೀರಿದ್ದ ಉದಾಸಿ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. 2008ರಲ್ಲಿ ಲೋಕೋಪಯೋಗಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಪರ ಕೆಲಸ ಮಾಡಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರಾದರೂ 2014ರ ರಾಜ್ಯರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದಿದ್ದರು. ಅಷ್ಟೇ ಅಲ್ಲ 2000ರಲ್ಲಿ ಬರಗಾಲ ಕಾಡಿತ್ತು. ಆ ವೇಳೆ ರೈತರ ಪರವಾಗಿ ಸಿಎಂ ಉದಾಸಿ ಹೋರಾಡಿ 100 ಕೋಟಿ ರೂ.ಗಳ ಬೆಳೆವಿಮೆ ಕೊಡಿಸಿದ್ದರು.

    ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

    ‘ಸ್ವಾರ್ಥಕ್ಕಾಗಿ ಕೆಟ್ಟ ಹೆಸ್ರು ತಂದ ಸಿಂಧೂರಿ ಜನ್ರ ಬಳಿ ಕ್ಷಮೆ ಕೇಳಲಿ.. ಐಎಎಸ್ ಅಧಿಕಾರಿಯನ್ನ ಕೂಡಲೇ ಬಂಧಿಸಿ…’

    ತಡರಾತ್ರಿ ಬಾತ್​ರೂಂನಲ್ಲಿ ರಕ್ತನಾಳ ಕೊಯ್ದುಕೊಂಡು ಕ್ರಷರ್​ ಮಾಲೀಕ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts