ವಿಜಯವಾಡ: ಶುಕ್ರವಾರವಷ್ಟೇ ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಮರುದಿನ ಸ್ಫೋಟಗೊಂಡು ಓರ್ವನ ಪ್ರಾಣ ತೆಗೆದಿದೆ. ಈ ಅವಘಡದಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮಕ್ಕಳಿಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಇಂತಹ ದುರ್ಘಟನೆ ಆಂಧ್ರದ ವಿಜಯವಾಡದಲ್ಲಿ ಶನಿವಾರ ಬೆಳಗಿನಜಾವ ಸಂಭವಿಸಿದೆ. ಮೂರು ದಿನಗಳ ಹಿಂದಷ್ಟೇ ತೆಲಂಗಾಣದಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ವಿಜಯವಾಡ ನಿವಾಸಿಗಳಾದ ಶಿವಕುಮಾರ್ ದಂಪತಿ ಶುಕ್ರವಾರ ಬೂಮ್ ಮೋಟಾರ್ಸ್ ಕಂಪನಿಯ ಕಾರ್ಬೆಟ್-14 ಸ್ಕೂಟರ್ ಖರೀದಿಸಿದ್ದರು. ಶುಕ್ರವಾರ ರಾತ್ರಿ ಬೆಡ್ರೂಮ್ನಲ್ಲಿ ಸ್ಕೂಟರ್ನ ಬ್ಯಾಟರಿಯನ್ನು ಚಾರ್ಜ್ಗೆ ಇಟ್ಟು ಮಲಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬ್ಯಾಟರಿ ಸ್ಫೋಟಗೊಂಡಿದ್ದು, ಕೋಣೆಯಲ್ಲಿ ಮಲಗಿದ್ದ ದಂಪತಿ ಗಂಭೀರ ಗಾಯಗೊಂಡಿದ್ದರು.
ಬೆಂಕಿಯ ಕೆನ್ನಾಲಗೆ ಇಡೀ ಮನೆಯನ್ನ ವ್ಯಾಪಿಸಿದ್ದು, ಸ್ಥಳೀಯರು ಕೂಡಲೇ ಮನೆಯಲ್ಲಿದ್ದವರ ರಕ್ಷಣೆಗೆ ಮುಂದಾದರು. ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡಿದ್ದ ಮಕ್ಕಳಿಬ್ಬರನ್ನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಪತಿ ಕೊನೆಯುಸಿರೆಳೆದರು. ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬ್ಯಾಟರಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಿಂದಿಗೆರೆ ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲಿ: ದೇವರಿಗೆ ಗ್ರಾಮಸ್ಥರ ಹರಕೆ!
ತಡರಾತ್ರಿ ಪಂಪ್ಸೆಟ್ ಕದಿಯಲು ಬಂದ ಯುವಕರಿಬ್ಬರನ್ನು ಅಮಾನುಷವಾಗಿ ಕೊಂದ ತೋಟದ ಮಾಲೀಕ!