More

    ಚಾರ್ಜ್​ ಹಾಕಿದ್ದ ವೇಳೆ ಎಲೆಕ್ಟ್ರಿಕ್​ ಸ್ಕೂಟರ್​ ಸ್ಫೋಟ: ಸುಟ್ಟು ಕರಕಲಾದ ಗೃಹ ಉಪಯೋಗಿ ವಸ್ತುಗಳು

    ಮಂಡ್ಯ: ಚಾರ್ಜ್​​ ಹಾಕಿದ್ದ ವೇಳೆ ಎಲೆಕ್ಟ್ರಿಕ್​ ಸ್ಕೂಟರ್​ ಒಂದು ಸ್ಫೋಟಗೊಂಡಿರುವ ಘಟನೆ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದೆ.

    ಸ್ಕೂಟರ್​ ಸ್ಫೋಟದಿಂದಾಗಿ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ. ಮುತ್ತುರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಒಳ ಭಾಗದಲ್ಲಿ ಬೈಕ್ ಚಾರ್ಜ್ ಹಾಕಿದ್ದಾಗ ಇದಕ್ಕಿದ್ದ ಹಾಗೆ ಸ್ಕೂಟರ್​ ಸ್ಫೋಟಗೊಂಡಿದೆ.

    ಇದನ್ನೂ ಓದಿ: ಭಾರತಕ್ಕೆ ಐತಿಹಾಸಿಕ ದಿನ: ದಿ ಎಲಿಫೆಂಟ್​ ವಿಸ್ಪರರ್ಸ್​, ನಾಟು ನಾಟುಗೆ ಒಲಿದ ಆಸ್ಕರ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…

    ಘಟನೆಯ ವೇಳೆ ಮನೆಯ ಒಳಭಾಗದಲ್ಲಿ ಐದು ಮಂದಿ ಇದ್ದರು. ಅದೃಷ್ಟವಶಾತ್​ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟದಿಂದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿದಂತೆ ಇತರೆ ವಸ್ತುಗಳು ನಾಶವಾಗಿದೆ. ಬಳಿಕ ಕುಟುಂಬದ ಐದು ಮಂದಿ ಸೇರಿ ಸ್ಫೋಟದ ಬೆಂಕಿಯನ್ನು‌ ನಂದಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬೇಸಿಗೆಯಲ್ಲಿ ತಂಪಾದ ಸ್ಥಳ ಹುಡುಕಿ ಬರಲಿವೆ ಹಾವುಗಳು: ಈ ಮುಂಜಾಗ್ರತಾ ಕ್ರಮಗಳು ನಿಮಗೆ ತಿಳಿದಿರಲಿ

    ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ..ಆದ್ರೆ ಕಾಂಗ್ರೆಸ್​ಗೆ ವಾರೆಂಟಿ ಅವಧಿ ಮುಗಿದಿದೆ; ಸಿಟಿ ರವಿ ವಾಗ್ದಾಳಿ

    ಆಸ್ಕರ್ ವಿಜೇತರಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts