More

    ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಭಯಭೀತರಾಗಿ ಶಾಲೆಯಿಂದ ಹೊರ ಓಡಿದ ಮಕ್ಕಳು

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನತೆ ಭಯಭೀತರಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಬುಧವಾರ ಬೆಳಗ್ಗೆ ಎರಡು ಬಾರಿ ಭೂಮಿ ಕಂಪಿಸಿ ಅಲ್ಲಲ್ಲಿ ಮನೆಗಳು ಬಿರುಬಿಟ್ಟಿದ್ದವು. ಇಂದು(ಗುರುವಾರ) ಅಡ್ಡಗಲ್ ಗ್ರಾಪಂ ವ್ಯಾಪ್ತಿಯಲ್ಲಿ ಕಂಪನದ ಅನುಭವ ಆಗಿದ್ದು, ಜನತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಶಾಲೆಯಲ್ಲಿದ್ದ ಮಕ್ಕಳು-ಶಿಕ್ಷಕರೂ ಭಯದಿಂದ ಹೊರಗೆ ಬಂದಿದೆ. ಮನೆಗಳ ಗೋಡೆಗಳಲು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಪಾತ್ರೆ ಸಾಮಾನು ಚೆಲ್ಲಾಪಿಲ್ಲಿಯಾಗಿವೆ.

    ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಗ್ರಾಮ ಮತ್ತು ಸಾದೇನಹಳ್ಳಿ ವ್ಯಾಪ್ತಿಯಲ್ಲಿ ಕೆಲ‌ ಸೆಕೆಂಡು ಭೂಮಿ ಕಂಪಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಇತ್ತೀಚಿಗೆ ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಭೂಮಿ ನಡುಗಿದ ಅನುಭವ ಆಗಿತ್ತು. ಇದಾದ ಬಳಿಕ ಅಂದ್ರೆ ನಿನ್ನೆ(ಬುಧವಾರ) ಬೆಳಗ್ಗೆ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಎರಡು ಬಾರಿ ಭೂಮಿ ಕಂಪಿಸಿದ್ದು, ಅಲ್ಲಲ್ಲಿ ಮನೆಗಳು ಬಿರುಬಿಟ್ಟಿದ್ದವು. ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.10 ಮತ್ತು ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ 1.23 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.14 ರ ವೇಳೆಯಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪನದಲ್ಲಿ ಕ್ರಮವಾಗಿ 3 ಮತ್ತು 2.9 ಕಂಪನದ ತೀವ್ರತೆ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಇಂದು ಮತ್ತೆ ಭೂಮಿ ಕಂಪಿಸಿದೆ.

    ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ನಂಜನಗೂಡಲ್ಲಿ ಅಪ್ರಾಪ್ತನ ಜತೆ 3 ಮಕ್ಕಳ ತಾಯಿ ಲವ್ವಿಡವ್ವಿ! ಇವಳ ಆಸೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts