More

    ಪ್ರತಿಪಕ್ಷ ಹೇಳಿದ್ದರಲ್ಲಿ ಕೆಲವು ಸತ್ಯವಿದೆ; ಆದ್ರೆ ರಾತ್ರೋರಾತ್ರಿ ವೈದ್ಯರ ಸೃಷ್ಟಿ ಅಸಾಧ್ಯ

    ಬೆಂಗಳೂರು: ಕರೊನಾ ನಿರ್ವಹಣೆ ವಿಷಯದಲ್ಲಿ ಪ್ರತಿಪಕ್ಷದವರು ಹೇಳಿರುವುದಲ್ಲಿ ಕೆಲವು ಸತ್ಯವಿದೆ. ಪ್ರಕರಣ ಹೆಚ್ಚು ಬರುತ್ತಿರುವುದರಿಂದ ಸುಸೂತ್ರವಾಗಿ ಬೆಡ್ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಇಲ್ಲಿ‌ ಮಾತ್ರವಿಲ್ಲ. ಇಡೀ ವಿಶ್ವದಲ್ಲಿ ಸಮಸ್ಯೆ ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದುವರಿದ ದೇಶಗಳಲ್ಲೂ ಹೆಚ್ಚು ಸಾವು ಆಗಿದೆ. ಅಂದರೆ ಅಲ್ಲಿನ ಸರ್ಕಾರ ವಿಫಲವಾಯಿತೆನ್ನುವುದೇ? ಆ ರೀತಿ ಹೇಳಲು ಬರುವುದಿಲ್ಲ.
    ಸಾಂಕ್ರಾಮಿಕ ಇಷ್ಟೊಂದು ವೇಗವಾಗಿ ಹರಡುತ್ತಿರುವುದನ್ನು ನೋಡಿರುವುದು ಇದೇ ಮೊದಲು ಎಂದ ಅವರು ಸರ್ಕಾರ ಇನ್ನಷ್ಟು ಮೂಲ ಸೌಕರ್ಯ ಒದಗಿಸಬಹುದು, ಆದರೆ ರಾತ್ರೋರಾತ್ರಿ ವೈದ್ಯರು, ನರ್ಸಿಂಗ್ ಸ್ಟಾಫ್ ಸೃಷ್ಟಿ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿರಿ ಪ್ರತಿಭಟನಾನಿರತ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದ ಪೊಲೀಸರು

    ಕರೊನಾ ನಿರ್ವಹಣೆ ಸಂಬಂಧ ಇಂದು ರಾಜ್ಯಪಾಲರು, ಸಿಎಂ ನಾಯಕತ್ವದಲ್ಲಿ ವಿಡಿಯೋ ಸಂವಾದ ನಡೆಯುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ. ಪರಮೇಶ್ವರ, ಎಚ್.ಡಿ.ಕುಮಾರಸ್ವಾಮಿ, ಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು, ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪಿಪಿಟಿ ಪ್ರದರ್ಶನ ಮಾಡಲಾಗುತ್ತದೆ ಎಂದರು.

    ಸಭೆಯಲ್ಲಿ ರಚನಾತ್ಮಕ ಸಲಹೆ ಸ್ವೀಕರಿಸುತ್ತೇವೆ. ಸರ್ಕಾರಕ್ಕೆ ಈ ವಿಷಯದಲ್ಲಿ ಪ್ರತಿಷ್ಠೆ ಇಲ್ಲ. ಒಂದು ತಂಡವಾಗಿ ಕೆಲಸಮಾಡುವ ಸಂದಿಗ್ಧ ಸಮಯ ಇದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ. ಸರ್ಕಾರ- ಪ್ರತಿಕ್ಷ ಎದುರು ಬದರಾದಾಗ ಆರೋಪ ಪ್ರತ್ಯಾರೋಪ ಬರುವುದು ಸಹಜ ಎಂದು ಅಭಿಪ್ರಾಯಪಟ್ಟರು.

    ಪರಿಸ್ಥಿತಿ ನಿಭಾಯಿಸಲು ಬೆಂಗಳೂರಿಗೆ ಬೇರೆ ನಿಯಮ ಮಾಡಬೇಕಾಗಿದೆ.‌ ಇಲ್ಲಿ ಶೇ.ಎಪ್ಪತ್ತು ಪ್ರಕರಣ ಇದೆ.‌ ಇಲ್ಲಿಂದ ಬೇರೆ ಕಡೆ ಹರಡಿಸುವ ಮುನ್ನ ಎಚ್ಚರಿಕೆ ವಹಿಸಬೇಕಿದೆ ಎಂದರು.

    ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ

    ಪ್ರತಿಭಟನಾನಿರತ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದ ಪೊಲೀಸರು

    ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

    VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

    ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts