More

  ಉತ್ತಮ ವಿಚಾರವಿದ್ದರೆ ಶಿಸ್ತಿನ ಜೀವನ

  ಪಿರಿಯಾಪಟ್ಟಣ: ಉತ್ತಮ ಆಚಾರ ಮತ್ತು ವಿಚಾರವಂತಿಕೆ ಮೈಗೂಡಿಸಿಕೊಂಡಲ್ಲಿ ಶಿಸ್ತುಬದ್ಧ ಜೀವನ ನಡೆಸಲು ಸಾಧ್ಯ ಎಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು.

  ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು ಭಾರತವನ್ನು ದೇವಾಲಯಗಳ ನಾಡು ಎಂದು ಕರೆಯಲಾಗುತ್ತದೆ. ದೇವರಲ್ಲಿರುವ ನಮ್ಮ ನಂಬಿಕೆ ಮತ್ತು ಭಕ್ತಿಯು ನಮಗೆ ಅಚಲ ವಿಶ್ವಾಸ ಮತ್ತು ಶಕ್ತಿಯನ್ನು ನೀಡಲಿದೆ ಎಂದರು.
  ಬೆಟ್ಟದಪುರದ ಸಲಿಲಾಕ್ಯ ಕನ್ನಡ ಮಠದ ಶ್ರೀ ಚನ್ನಬಸವ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಜೊಳ್ಳು ವಿಚಾರಗಳನ್ನು ತಿರಸ್ಕರಿಸಿ ಗಟ್ಟಿಯಾದ ವಿಚಾರಧಾರೆಗಳನ್ನು ಮೈಗೊಡಿಸಿಕೊಂಡು ಅಧರ್ಮ ತೆಗೆದು ಧರ್ಮ ಸ್ಥಾಪನೆಗೆ ಮುಂದಾಗಬೇಕು. ಅಲ್ಲದೆ ಪ್ರತಿಯೊಂದು ಧರ್ಮವನ್ನು ಗೌರವಿಸಿದಲ್ಲಿ ನೆಮ್ಮದಿಯುತ ಜೀವನ ನಮ್ಮದಾಗಲಿದೆ ಎಂದರು.

  ರಾವಂದೂರಿನ ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಧ್ಯಾನದಿಂದ ಮಾತ್ರ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದ್ದು, ಶ್ರದ್ಧೆ ಮತ್ತು ನಿಷ್ಠೆಯ ಆಚಾರ ವಿಚಾರಗಳನ್ನು ಬೆಳೆಸಿಕೊಂಡು ಮಾದರಿಯಾಗಿ ಬದುಕು ನಡೆಸಬೇಕು ಎಂದರು.

  ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವ ಮಹಾಸ್ವಾಮಿ, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿದರು.

  ದೇವಾಲಯದ ಉದ್ಘಾಟನೆಗೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಚನ್ನಸೋಗೆ ಗ್ರಾಮದ ಸಿ.ಎಸ್.ಪ್ರಶಾಂತ್ ಶಾಸ್ತ್ರೀ ಮತ್ತು ಪುರೋಹಿತರ ತಂಡ ನಡೆಸಿಕೊಟ್ಟರು. ಮೋದೂರು ಅಶೋಕ್ ಮತ್ತು ತಂಡದವರಿಂದ ವೀರಗಾಸೆ ಹಾಗೂ ಮಾದಳ್ಳಿಯ ಶ್ರೀ ಬಸವೇಶ್ವರ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿದ ಭಕ್ತರಿಗೆ ಮೂರು ದಿನಗಳ ಕಾಲವೂ ಅಚ್ಚುಕಟ್ಟಾದ ವ್ಯವಸ್ಥೆಯಲ್ಲಿ ಅನ್ನಸಂತರ್ಪಣೆ ನಡೆಯಿತು.

  ದಾನಿಗಳಿಗೆ ಸನ್ಮಾನ: ದೇವಾಲಯಕ್ಕೆ ಜಶಗ ಕೊಡುಗೆಯಾಗಿ ನೀಡಿದ ರತ್ನಮ್ಮ ಮರಿಸ್ವಾಮಪ್ಪ ಹಾಗೂ ಗಿರಿಜಾ ರಾಜಶೇಖರ್ ಮತ್ತು ದಾನಿಗಳಾದ ಹುಣಸೂರಿನ ಶಿವಮ್ಮ ಕ್ಲಿನಿಕ್‌ನ ಡಾ.ವೃಷಬೇಂದ್ರಸ್ವಾಮಿ, ಮೈಸೂರಿನ ವಕೀಲ ಬಸವರಾಜು, ಎಸ್‌ಎಂಎಸ್ ಗ್ರೂಪ್‌ನ ಪಿ.ಎಂ.ರಾಜಣ್ಣ, ಮೈಸೂರಿನ ಕೆ.ಸಿ.ನಾಗಮಣಿ ಸಿದ್ಧವೀರ ಶೆಟ್ಟರು, ಉದ್ಯಮಿ ಬಿ.ಎಸ್.ರಾಮಚಂದ್ರ, ಚಿಕ್ಕಹೊಸೂರಿನ ದಿ.ಸದಾಶಿವಪ್ಪ ಕುಟುಂಬದವರು ಸೇರಿದಂತೆ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದವರನ್ನು ಸನ್ಮಾನಿಸಲಾಯಿತು.

  ಹಾಸನ ತಣ್ಣೀರಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ, ಮಂಡ್ಯ ಜಿಲ್ಲೆ ತಗ್ಗಳ್ಳಿಪುರದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಅರೆಕೆರೆ ವೀರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಮಾದಾಪುರ ಚಂದ್ರಮೌಳೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಲಾಲದೇವನಹಳ್ಳಿಯ ಹಿರಣ್ಮಯಿ ತಾಯಿ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್, ಮುಖಂಡರಾದ ಕೆ.ಎಚ್.ವೀರಭದ್ರಪ್ಪ, ರಾಜಶೇಖರ್, ಶಿವರಾಜು, ಶಿವರುದ್ರಪ್ಪ, ರಾಜಣ್ಣ, ಕಾಳೇಗೌಡ, ಸಂತೋಷ್, ಕೆ.ಎಚ್.ರಾಜು, ಧರಣಿಶ್, ಮಹದೇವ್, ಜಗದೀಶಪ್ಪ, ಮಹೇಶ್, ಬಸವರಾಜಪ್ಪ, ಪುಟ್ಟಸೋಮಪ್ಪ, ದಿನೇಶ್, ಕುಮಾರ್, ಮಧು, ಮನು, ಗಿರೀಶ್, ಚಂದ್ರಶೇಖರ್, ಚಂದ್ರು, ಶಿವಣ್ಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಾದ ಕರಣಕುಪ್ಪೆ, ಉತ್ತೆನಹಳ್ಳಿ, ಮುದ್ದನಹಳ್ಳಿ, ಗೋಧಿಮನುಗನಹಳ್ಳಿ, ಕಲ್ಯಾಣಪುರ, ಕೊಳವಿಗೆ, ಕಲ್ಲುಮಾದಹಳ್ಳಿ, ಕಾಮಗೌಡನಹಳ್ಳಿ, ಮುಳ್ಳೂರು, ಹರಿನಹಳ್ಳಿ, ತಾತನಹಳ್ಳಿ, ಚಂದಗಾಲು, ರಾಜಗೌಡನಹುಂಡಿ, ಕಲ್ಲಹಳ್ಳಿ, ಬೀರನಹಳ್ಳಿ, ಪಂಚವಳ್ಳಿ, ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts