More

    ಟೈಟಾನ್ಸ್‌ಗೆ ಇಂದು ಸನ್‌ರೈಸರ್ಸ್‌ ಚಾಲೆಂಜ್: ಜಯದ ಹಳಿಗೇರುವ ವಿಶ್ವಾಸದಲ್ಲಿ ಗಿಲ್ ಬಳಗ

    ಅಹಮದಾಬಾದ್: ಸ್ಟಾರ್ ವೇಗಿ ಮೊಹಮದ್ ಶಮಿ ಗೈರಿನಲ್ಲಿ ಬೌಲಿಂಗ್ ವಿಭಾಗದ ಸಮತೋಲನ ಕಳೆದುಕೊಂಡಿರುವ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-17ರಲ್ಲಿ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಶುಭಮಾನ್ ಗಿಲ್ ಬಳಗ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.

    ಹಿಂದಿನ ಪಂದ್ಯದಲ್ಲಿ ರನ್‌ಪ್ರವಾಹ ಹರಿಸಿರುವ ಸನ್‌ರೈಸರ್ಸ್‌ ತಂಡದ ಬ್ಯಾಟರ್‌ಗಳು ಹಾಗೂ ಗುಜರಾತ್ ಟೈಟಾನ್ಸ್‌ನ ಬೌಲರ್‌ಗಳ ಸೆಣಸಾಟಕ್ಕೆ ಈ ಪಂದ್ಯ ಸಾಕ್ಷಿಯಾಗಲಿದೆ. ಕಳೆದ ಆವೃತ್ತಿಯಲ್ಲಿ ಅತ್ಯುತ್ತಮ ಬೌಲಿಂಗ್ ವಿಭಾಗದ ಹೊಂದಿದ್ದ ಗುಜರಾತ್, ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 168 ರನ್ ರಕ್ಷಿಸಿಕೊಳ್ಳುವಲ್ಲಿ ಸಲವಾಗಿತ್ತು. ಆದರೆ ಹಾಲಿ ಚಾಂಪಿಯನ್ ಸಿಎಸ್‌ಕೆ ಎದುರು ಸೋಲುಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ ಇತರ ತಂಡಗಳಿಗೆ ಹೋಲಿಸಿದರೆ ಕಳಪೆ ರನ್‌ರೇಟ್ ಹೊಂದಿದೆ. ಉಭಯ ತಂಡಗಳು ಮೊದಲ ಜಯವನ್ನು ಮುಂಬೈ ಇಂಡಿಯನ್ಸ್ ಎದುರು ದಾಖಲಿಸಿವೆ. ಅನುಭವಿ ಆಟಗಾರರಿಂದ ಕೂಡಿರುವ ಸನ್‌ರೈಸರ್ಸ್‌ ತಂಡ ೇವರಿಟ್ ಆಗಿ ಕಣಕ್ಕಿಳಿಯಲಿದೆ.

    ಸನ್‌ಗೆ ಬಲಿಷ್ಠ ಬ್ಯಾಟಿಂಗ್ ಶಕ್ತಿ: ಏಕದಿನ ವಿಶ್ವಕಪ್ ೈನಲ್ ಪಂದ್ಯದ ಆಸೀಸ್ ಹೀರೋ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ ಹಾಗೂ ಹೆನ್ರಿಕ್ ಕ್ಲಾಸೆನ್ ಭರ್ಜರಿ ಾರ್ಮ್‌ನಲ್ಲಿದ್ದು, ಸನ್‌ರೈಸರ್ಸ್‌ ಸದೃಢ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಸಹ ಲಯಕ್ಕೆ ಮರಳಿದರೆ ಗುಜರಾತ್ ಬೌಲರ್‌ಗಳಿಗೆ ಸತ್ವಪರೀಕ್ಷೆ ಎದುರಾಗಲಿದೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ದಾಖಲಿಸುವ ಮೂಲಕ ಸನ್‌ರೈಸರ್ಸ್‌ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ದೇಶೀಯ ಬೌಲರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಸವಾಲು ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಇದೆ. ಅನುಭವಿ ಭುವೇಶ್ವರ್ ಕುಮಾರ್ ವಿಕೆಟ್ ಪಡೆಯುವಲ್ಲಿ ವಿಲರಾದರೂ, ಎದುರಾಳಿಗಳ ರನ್‌ಗಳಿಕೆಗೆ ಕಡಿವಾಣ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಕಮ್ಮಿನ್ಸ್ ಸಹ ಉತ್ತಮ ಲಯದಲ್ಲಿದ್ದು, ಸ್ಪಿನ್ನರ್‌ಗಳ ಬೆಂಬಲ ಬೇಕಿದೆ. ಅನುಭವಿಗಳ ಸ್ಪಿನ್ನರ್‌ಗಳು ತಂಡದಲ್ಲಿ ಇಲ್ಲದಿರುವುದು ಪ್ರಮುಖ ಹಿನ್ನಡೆ ಎನಿಸಿದ್ದು, ಮಯಾಂಕ್ ಮಾರ್ಕಂಡೆ ಮೇಲೆ ಅವಲಂಬಿತವಾಗಿದೆ.

    ಆತಿಥೇಯರಿಗೆ ಬ್ಯಾಟಿಂಗ್ ಚಿಂತೆ: ಆಡಿರುವ 2 ಪಂದ್ಯಗಳಲ್ಲಿ ಗುಜರಾತ್ ತಂಡದ ಬ್ಯಾಟರ್‌ಗಳು ನಿರೀಕ್ಷಿತ ನಿರ್ವಹಣೆ ತೋರುವಲ್ಲಿ ಎಡವಿದ್ದಾರೆ. ಸಿಎಸ್‌ಕೆ ವಿರುದ್ಧ 207 ರನ್‌ಗಳ ಚೇಸಿಂಗ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಸಹ ತಂಡಕ್ಕೆ ಹಿನ್ನಡೆ ಎನಿಸಿತು. ಗಿಲ್, ಸಾಹ ಜೋಡಿ ಉತ್ತಮ ಆರಂಭ ಒದಗಿಸಬೇಕಿದೆ. ಡೇವಿಡ್ ಮಿಲ್ಲರ್, ತೆವಾಟಿಯಾ ಅವರಂಥ ಬಿಗ್‌ಹಿಟ್ಟರ್‌ಗಳ ದೊಡ್ಡ ಇನಿಂಗ್ಸ್ ಅವಶ್ಯವಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನ ತುಂಬುವ ಜವಾಬ್ದಾರಿ ಆ್ಘನ್‌ನ ಅಜ್ಮತ್‌ಉಲ್ಲಾ ಒಮರ್ಜಾಯಿ ಮೇಲಿದೆ. ಆರ್. ಸಾಯಿ ಕಿಶೋರ್, ಎಸ್‌ಆರ್‌ಎಚ್‌ನ ಮಾಜಿ ಆಟಗಾರ ರಶೀದ್ ಖಾನ್‌ಗೆ ಪಿಚ್ ನೆರವು ಒದಗಿಸುವ ಸಾಧ್ಯತೆಗಳಿವೆ. ವೇಗಿ ಉಮೇಶ್ ಯಾದವ್ ವೈಲ್ಯ ಬೌಲಿಂಗ್‌ನಲ್ಲಿ ಪ್ರಮುಖ ಹಿನ್ನಡೆಯಾಗಿದೆ. ಅನುಭವಿ ಕೇನ್ ವಿಲಿಯಮ್ಸನ್ ಅವರನ್ನು ಹನ್ನೊಂದರ ಬಳಗದಿಂದ ಹೊರಗಿಟ್ಟಿರುವುದು ಗುಜರಾತ್ ತಂಡದ ಬ್ಯಾಟಿಂಗ್ ಶಕ್ತಿ ಕುಂದಿಸಿದೆ.

    ಮುಖಾಮುಖಿ: 3
    ಸನ್‌ರೈಸರ್ಸ್‌: 1
    ಗುಜರಾತ್: 2
    ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts