More

    ಪಂಚಭೂತಗಳಲ್ಲಿ ಲೀನವಾದ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ

    ಬೆಂಗಳೂರು: ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಮಧ್ಯಾಹ್ನ ಕಲಾಗ್ರಾಮದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಬೌದ್ಧ ಧರ್ಮದ ವಿಧಿವಿಧಾನದಂತೆ ನೆರವೇರಿತು.

    ಬೌದ್ಧ ಪಥದ ಸಾಲುಗಳನ್ನು ಪಠಿಸಲಾಯಿತು. ಸಿದ್ದಲಿಂಗಯ್ಯರ ಮಗ ಗೌತಮ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ರಮಾ, ಮಗಳು ಮಾನಸ, ಅಳಿಯ ಗಿರಿ ಉಪಸ್ಥಿತರಿದ್ದರು.

    ಪಂಚಭೂತಗಳಲ್ಲಿ ಲೀನವಾದ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ

    ಸರ್ಕಾರದ ಪರವಾಗಿ ಡಿಸಿಎಂ ಅಶ್ವಥ್ ನಾರಾಯಣ ಅವರು ಸರ್ಕಾರದ ಪರವಾಗಿ ಸಿದ್ದಲಿಂಗಯ್ಯನವರಿಗೆ ಅಂತಿಮ ಗೌರವ ಸಲ್ಲಿಸಿದರು. ಆರ್​ಆರ್​ ನಗರ ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪುಷ್ಪ ನಮನ ಸಲ್ಲಿಸಿದರು.

    ಪಂಚಭೂತಗಳಲ್ಲಿ ಲೀನವಾದ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ

    ಇದಕ್ಕೂ ಮುನ್ನ ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಅಧ್ಯಯನ ಕೇಂದ್ರದ ಆವರಣದಲ್ಲಿ ಸಿದ್ದಲಿಂಗಯ್ಯರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಬುದ್ಧನ ಪ್ರತಿಮೆ ಅಡಿ ಸಿದ್ದಲಿಂಗಯ್ಯನವರ ಪಾರ್ಥಿವ ಶರೀರವನ್ನು ಇಟ್ಟು, ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ಪಂಚಭೂತಗಳಲ್ಲಿ ಲೀನವಾದ ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ

    ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿಕೆ ಸುರೇಶ್, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ, ಬೆಂಗಳೂರು ವಿವಿ ಕುಲಪತಿ ಕೆ.ಆರ್. ವೇಣುಗೋಪಾಲ್​, ಕುಲಸಚಿವರಾದ ಕೆ.ಜ್ಯೋತಿ, ಡಾ.ದೇವರಾಜ್​, ಐಎಎಸ್​ ಅಧಿಕಾರಿ ಕುಮಾರನಾಯ್ಕ ಸೇರಿದಂತೆ ನೂರಾರು ಜನರು ಸಿದ್ದಲಿಂಗಯ್ಯರ ಅಂತಿಮ ದರ್ಶನ ಪಡೆದರು.

    ಸಿಂಧೂರಿ ಪರ ಮೈಸೂರಲ್ಲಿ ಸಹಿ ಸಂಗ್ರಹ ಅಭಿಯಾನ: ಮತ್ತೆ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲು ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts