More

    ಉಪ ಚುನಾವಣೆಯಲ್ಲಿ ಕರೊನಾ ಲಸಿಕಾಕರಣ ಕಡ್ಡಾಯವೇ? ನೆಗೆಟಿವ್ ವರದಿ ಸಲ್ಲಿಸದಿದ್ದರೆ ಏನಾಗುತ್ತೆ?

    ವಿಜಯಪುರ: ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕರೊನಾ ಲಸಿಕಾಕರಣದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಚುನಾವಣಾ ಆಯೋಗ, ಅಭ್ಯರ್ಥಿಗಳು- ಚುನಾವಣಾ ಏಜೆಂಟ್- ಪೋಲಿಂಗ್ ಏಜೆಂಟ್- ಕೌಂಟಿಂಗ್ ಏಜೆಂಟ್- ವಾಹನ ಚಾಲಕರಿಗೆ ಮತ್ತು ಇತರರು ಕರೊನಾ ಲಸಿಕೆ ಪಡೆಯದಿದ್ದಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಬೇಕೆಂದು ತಿಳಿಸಿದೆ.

    ಮೊದಲನೇ ಲಸಿಕೆ ಪಡೆದು, ಎರಡನೇ ಲಸಿಕೆ ಪಡೆಯಲು ಸರ್ಕಾರವು ಹೊರಡಿಸಿದ ಲಸಿಕಾಕರಣದ ಶಿಷ್ಟಾಚಾರದಂತೆ ಲಸಿಕೆ ಪಡೆಯಲು ಅರ್ಹರಲ್ಲದವರೂ ಚುನಾವಣೆ ಮತ್ತು ಮತ ಎಣಿಕೆ ಪೂರ್ವದಲ್ಲಿ 72 ಗಂಟೆ ಮುಂಚಿತವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಿ ಮತದಾನ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದೆ.

    ಅದರಂತೆ ಅಭ್ಯರ್ಥಿ, ಎಲೆಕ್ಷನ್ ಏಜೆಂಟ್, ಪೋಲಿಂಗ್ ಏಜೆಂಟ್, ಕೌಂಟಿಂಗ್ ಏಜೆಂಟ್ ಹಾಗೂ ವಾಹನ ಚಾಲಕರು ಇತ್ಯಾದಿ ಮೊದಲನೇ ಲಸಿಕೆ ಪಡೆಯದೆ ಇರುವವರು ಮತದಾನ ಮತ್ತು ಎಣಿಕೆಯ ದಿನಾಂಕದ 48 ಗಂಟೆ ಮುಂಚಿತವಾಗಿ ಪಡೆದಿರುವ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಸಲ್ಲಿಸಿ ಮತದಾನ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದೆ.

    ಅದರಂತೆ ಲಸಿಕೆ ಪಡೆದಿಲ್ಲವೆಂದು ನಾಮಪತ್ರವನ್ನು ನಿರಾಕರಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿಬ್ಬಂದಿ ಮೇಲೆ ಉದ್ಯಮಿ ಹಾರಿಸಿದ ಗುಂಡು ಗುರಿ ತಪ್ಪಿ ಮಗನ ಪ್ರಾಣವನ್ನೇ ತೆಗೆಯಿತು!

    ನದಿಯಲ್ಲಿ ವೃದ್ಧನ ಶವ ತರಲು ಹೋದ ಮೂವರ ಪ್ರಾಣವನ್ನೂ ಹೊತ್ತೊಯ್ದ ಜವರಾಯ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts