More

    ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ಗೆ ಕರೊನಾ ಪಾಸಿಟಿವ್​: ಟ್ರಾವೆಲ್ ಹಿಸ್ಟರಿಯಲ್ಲಿದೆ ಸಿಎಂ ಸಭೆ, ಶಾಲಾ ಕಾರ್ಯಕ್ರಮ

    ತಿಪಟೂರು: ಶಾಲಾ-ಕಾಲೇಜುಗಳಲ್ಲೂ ಕರೊನಾ ಸ್ಫೋಟಗೊಂಡಿದ್ದು, ಇದೀಗ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ.

    ಕಳೆದ ನಾಲ್ಕೈದು ದಿನಗಳಿಂದ ಸತತ ಪ್ರವಾಸದಿಂದ ನಾಗೇಶ್​ ಬಳಲಿದ್ದರು. ಶುಕ್ರವಾರ ಕೋಲಾರ ಜಿಲ್ಲೆ ಮುಳಬಾಗಿಲಲ್ಲಿ ಡಿ.ವಿ.ಗುಂಡಪ್ಪ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣದ ಭೂಮಿಪೂಜೆಯಲ್ಲಿ ಭಾಗವಹಿಸಿದ್ದರು. ನಂತರ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ರಾತ್ರಿಯೇ ತಿಪಟೂರಿಗೆ ಮರಳಿದ್ದರು. ಹೊಸ ವರ್ಷದ ಮೊದಲ ದಿನವಾದ ಶನಿವಾರ ಬೆಳಗ್ಗೆ ಸಣ್ಣ ಪ್ರಮಾಣದಲ್ಲಿ ಜ್ವರ ಹಾಗೂ ಗಂಟಲು ಕೆರೆತ ಕಾಣಿಸಿಕೊಂಡಿದ್ದು, ಕೂಡಲೇ ಕರೊನಾ ಪರೀಕ್ಷೆ ಮಾಡಿಸಿದ್ದಾರೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.

    ತನ್ನ ಸಂಪರ್ಕದಲ್ಲಿದ್ದವರು ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳುವ ಜತೆಗೆ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ ಎಂದು ಸಚಿವ ನಾಗೇಶ್​ ಕೋರಿದ್ದಾರೆ. ಸಚಿವರು ಈಗಾಗಲೇ ಎರಡು ಡೋಸ್​ ಕರೊನಾ ಲಸಿಕೆ ಪಡೆದಿದ್ದಾರೆ.

    ಸತತ ಪ್ರವಾಸದಿಂದ ಬಳಲಿದ್ದ ಸಚಿವ ನಾಗೇಶ್​ ಅವರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಗಂಭೀರವಾದ ರೋಗ ಲಕ್ಷಣಗಳು ಇಲ್ಲವಾದ್ದರಿಂದ ಹೋಂ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಒಮಿಕ್ರಾನ್​ ಪರೀಕ್ಷೆಗೆ ಸ್ವಾಬ್​ ಅನ್ನು ಜಿನೋಮ್​ ಸೀಕ್ವೆನ್ಸಿಂಗ್​ಗೆ ಕಳುಹಿಸುವ ಬಗ್ಗೆ ಜಿಲ್ಲಾಧಿಕಾರಿ ಸಲಹೆ ಪಡೆಯಲಾಗುವುದು ಎಂದು ಡಿಎಚ್​ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

    ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್​ ಫೋಟೋ ಮುದ್ರಿಸಿದ ಕೆಎಂಎಫ್​! ಭಾವುಕರಾದ ಅಭಿಮಾನಿಗಳು

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts