More

    ಕೇರಳದಿಂದ ಬಂದವರಿಂದಲೇ ಸೋಂಕು ಸ್ಫೋಟ: ಸಿಎಂ ಬೊಮ್ಮಾಯಿ‌

    ಬೆಂಗಳೂರು: ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಜಿಲ್ಲೆಗಳ ಶಾಲೆ-ಕಾಲೇಜಿನ ಹಾಸ್ಟೆಲ್​ಗಳಲ್ಲಿ ಕರೊನಾ ಸೋಂಕು ಸ್ಫೋಟಕ್ಕೆ ಕೇರಳದಿಂದ ಬಂದವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇರಳದ ವಿದ್ಯಾರ್ಥಿಗಳು ಹಾಗೂ ಮೆಡಿಕಲ್ ಸಿಬ್ಬಂದಿಯಿಂದ ಮೂರು ಕಡೆ ಸೋಂಕು ಹರಡಿದೆ. ಪ್ರಕರಣಗಳು ಹೆಚ್ಚಿರುವ ಕಾಲೇಜು, ಹಾಸ್ಟೆಲ್​ಗಳನ್ನು ನಿಯಂತ್ರಿತ ವಲಯಗಳನ್ನಾಗಿ ಪ್ರಕಟಿಸಿ ಎಲ್ಲರಿಗೂ ತಪಾಸಣೆ, ಮಾದರಿ ಪರೀಕ್ಷೆ, ಪಾಸಿಟಿವ್ ವರದಿ ಬಂದವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಿದ್ದು, ಅದರಂತೆಯೇ ಕ್ರಮವಹಿಸಿದ್ದಾರೆ. ಧಾರವಾಡದ ಮೆಡಿಕಲ್ ಕಾಲೇಜು ಸಂಪೂರ್ಣ ನಿಯಂತ್ರಿತ ವಲಯವಾಗಿದ್ದು, ಎಲ್ಲರನ್ನು ಪರೀಕ್ಷಿಸಲಾಗುತ್ತಿದೆ. ಅಲ್ಲದೆ, ಹೊರ ರೋಗಿಗಳ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದರು.

    ಗಡಿ ಬಂದೋಬಸ್ತ್: ಕೇರಳದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿರುವ ಕಾರಣ ಆ‌ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ದಿನದ 24 ತಾಸು ನಿಗಾಯಿಡಲು, ಪ್ರತಿಯೊಬ್ಬರು ಆರ್​ಟಿಪಿಸಿಆರ್ ನೆಗೆಟಿವ್ ವರದಿ ತಂದಿರುವುದು, ಪರೀಕ್ಷಿಸುವಿಕೆಯನ್ನು ಕಡ್ಡಾಯ ಮಾಡಬೇಕೆಂದು ಸೂಚಿಸಲಾಗಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ಹಾಗೂ ಬಟ್ಸಾನಾದಲ್ಲಿ ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ನು ಪಾಲಿಸಿ ಮುನ್ನೆಚ್ಚರಿಕೆ ಕ್ರಮವಹಿಸಿದ್ದಾರೆ. ಈ ಮೂರು ದೇಶಗಳಿಂದ ಬರುವವರಿಗೆ ನಿಷೇಧ ವಿಧಿಸಲು ಮೋದಿ ಅವರಿಗೆ ಕೋರಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಲಸಿಕೆಗೆ ವೇಗ: ಲಸಿಕೆ ವಿತರಣೆಗೆ‌ ವೇಗದ ಸ್ಪರ್ಶ ನೀಡುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ‌. ಮೊದಲ ಡೋಸ್ ಶೇ.91 ಪೂರ್ಣಗೊಂಡಿದೆ. ಎರಡನೇ ಡೋಸ್ ಸದ್ಯಕ್ಕೆ ಶೇ.58 ಆಗಿದ್ದು, ಡಿಸೆಂಬರ್ ಅಂತ್ಯದೊಳಗೆ ಶೇ.70 ಪ್ರಗತಿ ಸಾಧಿಸುವ ಗುರಿ ನೀಡಲಾಗಿದೆ.

    ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ‌. ಆದರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಯ್ದುಕೊಳ್ಳುವುದು ಒಳಗೊಂಡು ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಲ್ಲ ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

    ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

    ಆಸ್ತಿಗಾಗಿ ಖಾಲಿ ಪತ್ರಕ್ಕೆ ಶವದ ಹೆಬ್ಬೆಟ್ಟು ಒತ್ತಿಕೊಂಡ್ರು! ಮೈಸೂರಲ್ಲಿ ಅಜ್ಜಿ ಶವದ ಎದುರೇ ಮಹಾ ವಂಚನೆ, ವಿಡಿಯೋ ವೈರಲ್​

    ನಟ ಪುನೀತ್​ಗಾಗಿ 500 ಕಿ.ಮೀ. ಓಟಕ್ಕೆ ಮುಂದಾದ 3 ಮಕ್ಕಳ ತಾಯಿ! ಇವರ ಮಾತು ಕೇಳಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts