More

    ನಾಳೆಯಿಂದ 3 ದಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗಿಲ್ಲ ಪ್ರವೇಶ

    ಚಾಮರಾಜನಗರ: ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ಮಾದಪ್ಪನ ದೇಗುಲಕ್ಕೆ ಶ್ರಾವಣ ಮಾಸದ ಕೊನೆಯ ಮೂರು ದಿನ ಭಕ್ತರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿದೆ.

    ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೆ. 5ರಿಂದ 7ರ ವರೆಗೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ದಿನಗಳಾದ ಸೆ. 5ರಿಂದ 7ರ ವರೆಗೆ ಎಣ್ಣೆಮಜ್ಜನ, ಅಮವಾಸ್ಯೆ ಪೂಜೆ ಹಾಗೂ 108 ಕುಂಭಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ 3ದಿ‌ನ ಪ್ರವೇಶ ನಿಷೇಧಿಸಿ, ವಿಶೇಷ ಪೂಜೆಯನ್ನು ಸ್ಥಳೀಯವಾಗಿ, ಸರಳವಾಗಿ ಆಚರಿಸಲು ಪ್ರಾಧಿಕಾರ ನಿರ್ಧರಿಸಿದೆ.

    ಕರೊನಾ ಭೀತಿಯ ನಡುವೆಯೂ ರಾಜ್ಯ ಮತ್ತು ತಮಿಳುನಾಡು ಭಾಗದಿಂದ ಮಾದಪ್ಪನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಪರಿಣಾಮ ಸ್ಥಳೀಯರಲ್ಲೂ ಸೋಂಕಿನ ಛಾಯೆ ಆವರಿಸಿದೆ. ಇನ್ನು ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿಸಿತ ಈ ಆದೇಶ ಹೊರಡಿಸಿದೆ.

    ಚನ್ನಪಟ್ಟಣದ ಗೌಡಗೆರೆಯ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್​

    ಚಿಕ್ಕಮಗಳೂರಲ್ಲಿ ಯುವಕನಿಗೆ ‘ಮೂತ್ರ ನೆಕ್ಕಿಸಿದ್ದ’ ಪಿಎಸ್​ಐಗೆ ನ್ಯಾಯಾಂಗ ಬಂಧನ

    ಹು-ಧಾ ಪಾಲಿಕೆ ಚುನಾವಣೆ: ಕರ್ತವ್ಯನಿರತ ಪೇದೆ ದುರಂತ ಸಾವು! ಬಿಕ್ಕಿಬಿಕ್ಕಿ ಅಳುತ್ತಲೇ ಶವ ತೆಗೆದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts