More

    ಬೆಂಗಳೂರಿಗೆ ಗುಡ್​ಬೈ: ಗಂಟು ಮೂಟೆ ಕಟ್ಟಿಕೊಂಡು ಊರುಗಳತ್ತ ಪ್ರಯಾಣ

    ಬೆಂಗಳೂರು: ಮಹಾಮಾರಿ ಕರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂನಂತೆ ರಾಜ್ಯಾದಂತ ನಾಳೆ(ಏ.27) ರಾತ್ರಿ 9ರಿಂದ ಮೇ 10ರ ವರೆಗೆ ಕರ್ನಾಟಕ ಲಾಕ್​ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸುತ್ತಿದ್ದಂತೆ ಲಕ್ಷಾಂತರ ಮಂದಿ ಬೆಂಗಳೂರಿಂದ ಊರುಗಳತ್ತ ಮುಖ ಮಾಡಿದ್ದಾರೆ.

    ಸಾವಿರಾರು ಮಂದಿ ಮೆಜೆಸ್ಟಿಕ್​ ಬಸ್​, ರೈಲು ನಿಲ್ದಾಣದ ಬಳಿ ಜಮಾಯಿಸುತ್ತಿದ್ದ ದೃಶ್ಯ ಮಧ್ಯಾಹ್ನ 3.30ರಿಂದಲೇ ಕಂಡುಬಂತು. ಲಗೇಜು ಸಮೇತ ಕೂಲಿಕಾರ್ಮಿಕರು ಸ್ವಗ್ರಾಮದತ್ತ ಹೋಗಲು ಬಸ್​ಗಾಗಿ ಕಾಯುತ್ತಿದ್ದರು.

    ನಾಳೆ ರಾತ್ರಿ 9ರ ವರೆಗೂ ಮಾತ್ರವೇ ಎಂದಿನಂತೆ ಬಸ್​ ಸಂಚಾರ ಇರಲಿದೆ. ನಂತರ ಬಸ್​ಗಳು ರಸ್ತೆಗೆ ಇಳಿಯುವುದಿಲ್ಲ. ಕೆಎಸ್​ಆರ್​ಟಿಸಿ ಬಸ್​ ಮತ್ತು ಬಿಎಂಟಿಸಿ ಬಸ್​ ಸಂಚಾರ ಸ್ಥಗಿತಗೊಳ್ಳಲಿದೆ. ಅಂತಾರಾಜ್ಯ ಬಸ್​ ಸಂಚಾರ ಬಂದ್​ ಆಗಲಿದೆ. ಮೆಟ್ರೋ ಸಂಚಾರವೂ ಇರುವುದಿಲ್ಲ. ಅಲ್ಲದೆ, ಮುಂದಿನ ಎರಡು ವಾರದಲ್ಲಿ ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಮತ್ತೆ ಇದೇ ಟೈಟ್​ ರೂಲ್ಸ್​ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಕೂಲಿಕಾರ್ಮಿಕರು ಇಂದೇ ಊರು ತಲುಪಲು ಗಂಟು ಮೂಟೆ ಕಟ್ಟಿಕೊಂಡು ಹೊರಟಿದ್ದಾರೆ.

    ಬೆಂಗಳೂರಿನ ಪರಿಸ್ಥಿತಿ ಮಹಾರಾಷ್ಟ್ರಕ್ಕಿಂತ ಘೋರವಾಗಿದೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹೇಳಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ವೀಕೆಂಡ್​ ಕರ್ಫ್ಯೂನಂತೆ 14 ದಿನ ಕರ್ನಾಟಕ ಲಾಕ್​: ಅಗತ್ಯ ವಸ್ತು ಖರೀದಿಗೆ ಟೈಂ ಫಿಕ್ಸ್​, ಬಸ್​ ಸಂಚಾರ ಬಂದ್​, ಎಲೆಕ್ಷನ್​ ಮುಂದೂಡಿಕೆ

    ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts