More

    ಕರೊನಾ ಸೋಂಕು ಹೆಚ್ಚಳ: ಜ.21ರಂದು ಸಿದ್ಧಗಂಗೆಯಲ್ಲಿ ನಡೆಯಬೇಕಿದ್ದ ದಾಸೋಹ ದಿನ ರದ್ದು

    ತುಮಕೂರು: ಜ. 21ರಂದು ಸಿದ್ಧಗಂಗೆಯಲ್ಲಿ ಆಯೋಜಿಸಬೇಕಿದ್ದ ದಾಸೋಹದಿನವನ್ನು ಸಂಭಾವ್ಯ ಕರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

    ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವಾಗಿ ಸರ್ಕಾರ ಘೋಷಣೆ ಮಾಡಿತ್ತು. ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ನಡೆಯಬೇಕಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಧಾರ್ಮಿಕ, ಜಾತ್ರೆ, ಉತ್ಸವಗಳನ್ನು ರದ್ದು ಪಡಿಸಿದೆ‌. ಹಾಗಾಗಿ ಸಿದ್ಧಗಂಗಾ ಶ್ರೀಗಳ ಸ್ಮರಣಾರ್ಥ ನಡೆಯಬೇಕಿದ್ದ ದಾಸೋಹ ದಿನ ಕಾರ್ಯಕ್ರಮ ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

    ಅಂದು ಸರಳ ಪೂಜೆ, ಉತ್ಸವ ಮಾಡಲು ನಿರ್ಧರಿಸಲಾಗಿದೆ. ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ಸಿದ್ದಲಿಂಗ ಶ್ರೀಗಳು ಮನವಿ ಮಾಡಿದರು.

    ಕೊರಗಜ್ಜನ ವೇಷ ಧರಿಸಿ ಮದ್ವೆ ಮನೇಲಿ ಡಾನ್ಸ್​, ಇಬ್ಬರ ಬಂಧನ: ಆರೋಪಿ ಬಿಡುಗಡೆಗೆ ಒತ್ತಡ ಏರಿದ್ದ ಬಿಜೆಪಿ ಮುಖಂಡ ಅಮಾನತು

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಕಾಳಿ ದೇವಿ ಮೂರ್ತಿಯ ಪಾದದ ಬಳಿ ಯುವಕನ ರುಂಡ ಪತ್ತೆ! ಬೆಚ್ಚಿಬಿದ್ದ ಅರ್ಚಕ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts