More

    ಸರ್ಕಾರದ ಆಸ್ತಿಗಳ ಕಾಪಾಡುವ ಬದ್ಧತೆ ಅಗತ್ಯ

    ತೀರ್ಥಹಳ್ಳಿ: ಆಡಳಿತ ವ್ಯವಸ್ಥೆಗೆ ಸರ್ಕಾರದಿಂದ ಒದಗಿಸುವ ಕಟ್ಟಡ ಮುಂತಾದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಹೊಣೆಗಾರಿಕೆ ಅತಿ ಅಗತ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಹೇಳಿದರು.

    ಪಟ್ಟಣದ ಶೀಬಿನಕೆರೆ ಬಡಾವಣೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ 2.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನ್ಯಾಯಾಧೀಶರ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕೋರಿಕೆ ಮೇರೆಗೆ ಸರ್ಕಾರ ಒದಗಿಸುವ ಇಂತಹ ಸವಲತ್ತುಗಳನ್ನು ಇತರರಿಗೆ ಮಾದರಿ ಆಗುವಂತೆ ಮತ್ತು ನಮ್ಮ ಸ್ವಂತ ಮನೆಯಂತೆಯೇ ನೋಡಿಕೊಳ್ಳುವ ಬದ್ಧತೆಯನ್ನು ಹೊಂದಬೇಕು. ಅತ್ಯಂತ ಸುಂದರವಾದ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಈ ಸಮುಚ್ಚಯದ ಸ್ವಚ್ಛತೆಯನ್ನು ಕಾಪಾಡುವ ಹೊಣೆಗಾರಿಕೆ ಇರಲಿ ಎಂದರು.
    ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮಾತನಾಡಿ, ಈವರೆಗೆ ನ್ಯಾಯಾಧೀಶರಿಗೆ ಬಾಡಿಗೆ ಕಟ್ಟಡದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಸಮುಚ್ಚಯದ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ. ಎರಡು ವರ್ಷದ ಹಿಂದೆ ಇದೇ ದಿನದಂದು ಕಟ್ಟಡ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ನಿವೇಶನ ಹಸ್ತಾಂತರ ಮಾಡಲಾಗಿತ್ತು. ಇದೀಗ ಕಟ್ಟಡ ನಿರ್ಮಾಣಗೊಂಡಿದೆ ಎಂದರು.
    ಲೇಖಾ ದೇವದಾಸ್, ಲೋಖೋಪಯೋಗಿ ಇಲಾಖೆ ಅಧಿಕಾರಿ ಗಣೇಶ್ ಇತರರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಸ್.ಭರತ್ ನಿರೂಪಿಸಿದರು. ನ್ಯಾಯಾಧೀಶ ಯಶವಂತಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts