More

    ರಾಜ್ಯದಲ್ಲಿ ವಾಡಿಕೆಗೂ ಮುನ್ನವೇ ಚಳಿ ಶುರು

    ಬೆಂಗಳೂರು: ವಾಡಿಕೆಗಿಂತ ಮುನ್ನವೇ ರಾಜ್ಯದಲ್ಲಿ ಚಳಿ ಶುರುವಾಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ತಣ್ಣನೆ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಚಳಿ ಅನುಭವಾಗುತ್ತಿದೆ.

    ಸಾಮಾನ್ಯವಾಗಿ ನವೆಂಬರ್​ ಕೊನೇ ವಾರ ಅಥವಾ ಡಿಸೆಂಬರ್​ ಮೊದಲ ವಾರದಲ್ಲಿ ಚಳಿಗಾಲ ಶುರುವಾಗಿ ಫೆಬ್ರವರಿವರೆಗೆ ಇರಲಿದೆ. ಈ ವೇಳೆ ಉತ್ತರದಿಂದ ದಕ್ಷಿಣ ದಿಕ್ಕಿನತ್ತ ಗಾಳಿ ಬೀಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸತತ ಮಳೆ ಆಗುತ್ತಿರುವುದರಿಂದ ತಣ್ಣನೆ ಗಾಳಿ ಬೀಸತೊಡಗಿದೆ. ಇದರಿಂದ ಕೆಲ ಭಾಗಗಳಲ್ಲಿ ಚಳಿ ಕಾಣಿಸಿಕೊಂಡಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

    ರಾಜ್ಯದಲ್ಲಿ ಮುಂಗಾರು ಮಳೆ ಮುಗಿದು ಹಿಂಗಾರು ಮಳೆ ಶುರುವಾಗಿದೆ. ಅಂದಿನಿಂದ ಈವರೆಗೆ ಮಳೆಯಾಗುತ್ತಲೇ ಇದೆ. ಚಳಿಗಾಲ ಶುರುವಾಗುವ ಮುನ್ನ ಮಳೆ ಕಡಿಮೆ ಆಗಬೇಕು. ಆಗಾ ಮಾತ್ರ ಚಳಿಗಾಲ ಆರಂಭಕ್ಕೆ ಪೂರಕ ವಾತಾವರಣ ಉಂಟಾಗಲಿದೆ ಎಂದರು.

    ‘ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?’ ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ಭಜರಂಗಿ 2 ಪ್ರೀ ರಿಲೀಸ್​ ದಿನವೇ ಅಪ್ಪು ಡಲ್​ ಆಗಿದ್ದರು… ಪುನೀತ್​ ಸಾವಿನ ಬಳಿಕ ಸ್ಫೋಟಕ ವಿಚಾರ ಬಿಚ್ಚಿಟ್ಟ ಶಿವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts