More

    ಬರ್ತ್​ ಡೇ ಆಚರಿಸಿಕೊಳ್ಳಲ್ಲ, ಹೊಸ ಯೋಜನೆಗಳ ಘೋಷಣೆ ಇಲ್ಲ: ಸಿಎಂ ಬೊಮ್ಮಾಯಿ

    ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ‌ ಅಧಿಕಾರ ಸ್ವೀಕರಿಸಿ ನಾಳೆಗೆ(ಜ.28) ಆರು ತಿಂಗಳು. ಅದೇ ದಿನ ಸಿಎಂ ಬರ್ತ್​ ಡೇ ಕೂಡ. ಅಂದು 62ನೇ ವಸಂತಕ್ಕೆ ಬಸವರಾಜ ಬೊಮ್ಮಾಯಿ ಕಾಲಿಡಲಿದ್ದಾರೆ. ಈ ವಿಶೇಷ ದಿನದ ಬಗ್ಗೆ ಬೊಮ್ಮಾಯಿ‌ ಹೇಳಿದ್ದೇನು? ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ, ಹೊಸ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದಿದ್ದೇಕೆ? ಇಲ್ಲಿದೆ ಉತ್ತರ.

    ಆರ್​ಟಿ ನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಯಾವತ್ತೂ ಜನ್ಮ ದಿನ ಆಚರಿಸಿಕೊಂಡಿಲ್ಲ, ನಾಳೆಯೂ ಆಚರಿಸಿಕೊಳ್ಳುವುದಿಲ್ಲ. ಪದಗ್ರಹಣ ಮಾಡಿ ನಾಳೆಗೆ ಆರು ತಿಂಗಳ ಪೂರೈಸಲಿರುವ ಕಾರಣಕ್ಕೆ ಅಚ್ಚರಿ, ಮಹತ್ವದ ಘೋಷಣೆಗಳನ್ನು ಮಾಡುವುದಿಲ್ಲ ಎಂದರು.

    ನಮ್ಮದು ಸ್ಪಂದನಾಶೀಲ ಸರ್ಕಾರ. ಅಗತ್ಯತೆ, ಬೇಡಿಕೆಗೆ ಅನುಗುಣವಾಗಿ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಎಲ್ಲ ರೈತರಿಗೆ ವಿಸ್ತರಿಸಲು ಕೋರಿದರು. ಒಪ್ಪಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಈಗ ಬೆಂಬಲ ಬೆಲೆಯಡಿ ರಾಗಿ ಖರೀದಿ ಅವಧಿ ವಿಸ್ತರಿಸಬೇಕು ಎಂದು ರೈತರು ಕೇಳುತ್ತಿದ್ದು, ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಅವಶ್ಯಕತೆಯಿದ್ದಾಗಲೆಲ್ಲ ಸರ್ಕಾರ ಸ್ಪಂದಿಸಿದ್ದು, 100 ದಿನ ಅಥವಾ 6 ತಿಂಗಳು ಎಂದು ವಿಶೇಷ ಸಂದರ್ಭಕ್ಕಾಗಿ ಕಾದು ಕುಳಿತಿಲ್ಲ ಎಂದು ಬೊಮ್ಮಾಯಿ‌ ತಿಳಿಸಿದರು.

    ತಜ್ಞರಿಂದ ಮತ್ತೊಂದು ವರದಿ ನಿರೀಕ್ಷೆ: ಕರೊನಾ ಸೋಂಕು ಪರಿಸ್ಥಿತಿ ಅವಲೋಕಿಸಿ ಮತ್ತೊಂದು ವರದಿ ಸಲ್ಲಿಸಲು ತಜ್ಞರ ತಾಂತ್ರಿಕ ಸಲಹಾ ಸಮಿತಿಗೆ ಕೇಳಿಕೊಂಡಿದ್ದು, ಆ ವರದಿ ಬಂದ ನಂತರ ಸಭೆ ಸೇರಿ ಚರ್ಚಿಸಿ ಸರ್ಕಾರದ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಸಿಎಂ ಹೇಳಿದರು.

    ಸಚಿವ ಸಂಪುಟ ಸಭೆಯಲ್ಲಿ ಕಾರ್ಯಸೂಚಿ ಪ್ರಕಾರ ಚರ್ಚೆಯಾಗಲಿದ್ದು, ಇತರ ವಿಷಯಗಳಡಿ ಕರೊನಾ ನಿರ್ಬಂಧ ಮತ್ತಿತರ ವಿಷಯಗಳು ಪ್ರಸ್ತಾಪವಾದರೆ ಚರ್ಚೆಗೆ ಸಿದ್ಧವೆಂದು ಸಿಎಂ ಬೊಮ್ಮಾಯಿ‌ ಸ್ಪಷ್ಟಪಡಿಸಿದರು.

    ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

    ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಸಾವು

    ಗಂಡನ ಬಿಟ್ಟು ಪ್ರಿಯಕರನ ಹಿಂದೆ ಹೋದಾಕೆ ದುರಂತ ಅಂತ್ಯ! ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಪ್ರಿಯಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts