More

    ಕರೊನಾ ಪರಿಸ್ಥಿತಿ ನಿರ್ವಹಣೆಗಾಗಿ ಇಂದು ಕೆಲ ನಿರ್ಣಯ ತೆಗೆದುಕೊಳ್ತೀವಿ: ಸಿಎಂ ಬೊಮ್ಮಾಯಿ‌

    ಬೆಂಗಳೂರು: ಕರೊನಾ ಮೂರನೇ ಅಲೆ ಹಾಗೂ ಹೊಸ ರೂಪಾಂತರಿ ಒಮಿಕ್ರಾನ್ ವೈರಾಣು ನಿಯಂತ್ರಣಕ್ಕಾಗಿ ನಿರ್ಬಂಧಗಳನ್ನು ಜಾರಿಗೊಳಿಸಿ ತಿಂಗಳು ಕಳೆದಿದೆ. ಪರಿಸ್ಥಿತಿ ಅವಲೋಕಿಸಿ ಕರೊನಾ ನಿರ್ವಹಣೆಗಾಗಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದರು.

    ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಂದಿನ ನಡೆ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಉದ್ದೇಶದಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು(ಶನಿವಾರ) ಮಧ್ಯಾಹ್ನ ಸಭೆ ಕರೆದಿರುವೆ ಎಂದರು.

    ವಸ್ತುಸ್ಥಿತಿ ಪರಾಮರ್ಶಿಸಿ ವರದಿ ಸಲ್ಲಿಸಲು ತಜ್ಞರಿಗೆ ಕೇಳಿಕೊಳ್ಳಲಾಗಿದೆ. ಕರೊನಾ ಬೆಳವಣಿಗೆ, ಬೆಂಗಳೂರು ಹಾಗೂ ಉಳಿದ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮೇಲೆ ಸರ್ಕಾರ ನಿಗಾವಹಿಸಿ, ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮವಹಿಸಿದೆ ಎಂದು ಸಿಎಂ ತಿಳಿಸಿದರು.

    ನಿರ್ಬಂಧಗಳನ್ನು ಸಡಿಲಗೊಳಿಸಬೇಕು, ಬೆಂಗಳೂರಿನಲ್ಲಿ ಶಾಲೆಗಳ ಪುನರಾರಂಭದ ಬೇಡಿಕೆಗಳಿವೆ. ಸೋಂಕಿನ ಬೆಳವಣಿಗೆ ಗಮನಕ್ಕಿದ್ದು, ಸಚಿವರು, ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜತೆಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬದಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts