More

    ನೇಣುಬಿಗಿದ ಸ್ಥಿತಿಯಲ್ಲಿ ಚಿಲುಮೆ ಮಠದ ಶ್ರೀಗಳ ಶವ ಪತ್ತೆ! ಧನುರ್ಮಾಸ ಪೂಜೆ ಬಳಿಕ ನಡೆದಿದ್ದೇನು?

    ಮಾಗಡಿ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆಯ ಮೂಲದ ಬಸವಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಬಸವರಾಜು. ಪಿಯು ವಿದ್ಯಾಭ್ಯಾಸ ಮಾಡಿರುವ ಇವರು 1982ರಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಭಕ್ತರ ಮನೆಯಲ್ಲಿ ಪೂಜೆ ಮುಗಿಸಿ ಭಾನುವಾರ ರಾತ್ರಿ ಮಠಕ್ಕೆ ಬಂದಿದ್ದ ಶ್ರೀಗಳು, ಸೋಮವಾರ ಬೆಳಗ್ಗೆ ಧನುರ್ಮಾಸ ಪೂಜೆ ಮತ್ತು ಸದಾಶಿವ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ನೆರವೇರಿಸಿದ್ದರು. ಇದಾದ ಬಳಿಕ ಮಠದ ಕಿಟಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ಶ್ರೀಗಳು ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.

    ನೇಣುಬಿಗಿದ ಸ್ಥಿತಿಯಲ್ಲಿ ಚಿಲುಮೆ ಮಠದ ಶ್ರೀಗಳ ಶವ ಪತ್ತೆ! ಧನುರ್ಮಾಸ ಪೂಜೆ ಬಳಿಕ ನಡೆದಿದ್ದೇನು?

    ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಗಿರೀಶ್​, ಡಿವೈಎಸ್​ಪಿ ಓಂಪ್ರಕಾಶ್​​, ಸಿಪಿಐ ಎ.ಪಿ. ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಲುಮೆ ಮಠಕ್ಕೆ ವಿವಿಧ ಮಠಾಧೀಶರು, ಭಕ್ತರು ಭೇಟಿ ನೀಡಿದ್ದಾರೆ. ಬಸವಲಿಂಗ ಶ್ರೀಗಳ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಲಿದೆ.

    ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

    ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts