More

    ಏಷ್ಯಾಡ್​ನಲ್ಲಿ ಮೊದಲ ಬಾರಿ ಪದಕಗಳ ಶತಕ ಸಿಡಿಸಿದ ಭಾರತ; ಇಂದು ಸ್ವರ್ಣ ಸಿಕ್ಸರ್​ ನಿರೀಕ್ಷೆ!

    ಹಾಂಗ್​ರೆೌ: ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ‘ಅಬ್​ ಕಿ ಬಾರ್​, ಸೌ ಪಾರ್​’ (ಈ ಬಾರಿ ನೂರರ ಆಚೆ) ಘೋಷಣೆಯೊಂದಿಗೆ ಅಭಿಯಾನ ಆರಂಭಿಸಿದ್ದ ಭಾರತ, 100 ಪದಕ ಗೆಲ್ಲುವ ತನ್ನ ಕನಸನ್ನು ಕ್ರೀಡಾಕೂಟದಲ್ಲಿ ಇನ್ನೂ 2 ದಿನಗಳ ಬಾಕಿ ಇರುವಂತೆಯೇ ನನಸಾಗಿಸಿಕೊಂಡಿದೆ. ಪದಕ ಸ್ಪರ್ಧೆಯ 13ನೇ ದಿನವಾದ ಶುಕ್ರವಾರ ಭಾರತ 1 ಚಿನ್ನ, 2 ಬೆಳ್ಳಿ, 6 ಕಂಚಿನ ಪದಕ ಒಲಿಸಿಕೊಂಡಿತು. ಇದರೊಂದಿಗೆ ಭಾರತದ ಒಟ್ಟು ಪದಕ ಗಳಿಕೆ 95ಕ್ಕೆ (22 ಚಿನ್ನ, 34 ಬೆಳ್ಳಿ, 39 ಕಂಚು) ಏರಿದೆ. ಇದಲ್ಲದೆ ಈಗಾಗಲೆ ಇನ್ನೂ 7 ಪದಕಗಳು (ಕಬಡ್ಡಿ-2, ಕ್ರಿಕೆಟ್​-1, ಬ್ಯಾಡ್ಮಿಂಟನ್​-1, ಆರ್ಚರಿ-3) ಖಚಿತಗೊಂಡಿರುವುದರಿಂದ ಭಾರತ ಏಷ್ಯಾಡ್​ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು.

    ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. ಶನಿವಾರ ಭಾರತ ಒಟ್ಟು 6 ಫೈನಲ್​ಗಳಲ್ಲಿ ಚಿನ್ನಕ್ಕಾಗಿ ಹೋರಾಡಲಿದೆ. ಜತೆಗೆ ಚೆಸ್​ನಲ್ಲಿ ಅವಳಿ ಪದಕದ ನಿರೀಕ್ಷೆ ಇದೆ. ಕುಸ್ತಿ, ಸ್ಕೇಟಿಂಗ್​ನಲ್ಲೂ ಪದಕಕ್ಕೆ ಸೆಣಸಲಿದೆ. ಮಹಿಳಾ ಹಾಕಿ, ಆರ್ಚರಿಯಲ್ಲಿ ಕಂಚಿಗೆ ಹೋರಾಡಲಿದೆ.

    ಇಂದು ‘ಸ್ವರ್ಣ ಸಿಕ್ಸರ್​’ ನಿರೀಕ್ಷೆ…
    ಫೈನಲ್​ನಲ್ಲಿ ಭಾರತೀಯರ ಕಾದಾಟ:
    *ಪುರುಷರ ಟಿ20 ಕ್ರಿಕೆಟ್​
    *ಪುರುಷ-ಮಹಿಳಾ ಕಬಡ್ಡಿ
    *ಆರ್ಚರಿ ಪುರುಷರ ವೈಯಕ್ತಿಕ
    *ಆರ್ಚರಿ ಮಹಿಳಾ ವೈಯಕ್ತಿಕ
    *ಬ್ಯಾಡ್ಮಿಂಟನ್​ ಡಬಲ್ಸ್​: ಚಿರಾಗ್​-ಸಾತ್ವಿಕ್​

    ಏಷ್ಯಾಡ್​ನಲ್ಲಿ ಇಂದು ಭಾರತದ ಸ್ಪರ್ಧೆಗಳು
    *ಆರ್ಚರಿ: ಬೆಳಗ್ಗೆ 6.10ಕ್ಕೆ ಮಹಿಳೆಯರ ಕಂಪೌಂಡ್​ ವಿಭಾಗದ ಕಂಚಿಗಾಗಿ ಅದಿತಿ ಗೋಪಿಚಂದ್​ ಕಾದಾಟ; ಬೆಳಗ್ಗೆ 6.30ಕ್ಕೆ ಮಹಿಳೆಯರ ಕಂಪೌಂಡ್​ ವಿಭಾಗದ ಚಿನ್ನಕ್ಕೆ ಜ್ಯೋತಿ ಸುರೇಖಾ ಕಾದಾಟ; ಬೆಳಗ್ಗೆ 7.10ಕ್ಕೆ ಪುರುಷರ ಕಂಪೌಂಡ್​ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್​ ವರ್ಮ&ಓಜಸ್​ ಡಿಯೋಟಾಲ್​ ಕಾದಾಟ.
    *ಕ್ರಿಕೆಟ್​: ಬೆಳಗ್ಗೆ 11.30ರಿಂದ ಪುರುಷರ ವಿಭಾಗದಲ್ಲಿ ಅಫ್ಘಾನಿಸ್ತಾನ ವಿರುದ್ಧ ಫೈನಲ್​.
    *ಕಬಡ್ಡಿ: ಬೆಳಗ್ಗೆ 7ರಿಂದ ಮಹಿಳಾ ವಿಭಾಗದಲ್ಲಿ ಚೀನಾ ತೈಪೆ ವಿರುದ್ಧ ಫೈನಲ್​; ಮಧ್ಯಾಹ್ನ 12.30ರಿಂದ ಪುರುಷರ ವಿಭಾಗದಲ್ಲಿ ಇರಾನ್​ ವಿರುದ್ಧ ಫೈನಲ್​.
    *ಕುಸ್ತಿ: ಬೆಳಗ್ಗೆ 7.30ರಿಂದ ಪುರುಷರ 74 ಕೆಜಿ ವಿಭಾಗ: ಯಶ್​ ಕಣಕ್ಕೆ; 86 ಕೆಜಿ ವಿಭಾಗ: ದೀಪಕ್​ ಪೂನಿಯಾ ಕಣಕ್ಕೆ; 97 ಕೆಜಿ ವಿಭಾಗ: ವಿಕ್ಕಿ ಚಹರ್​ ಕಣಕ್ಕೆ; 125 ಕೆಜಿ ವಿಭಾಗ: ಸುಮಿತ್​ ಮಲಿಕ್​ ಕಣಕ್ಕೆ.
    *ಹಾಕಿ: ಮಧ್ಯಾಹ್ನ 1.30ರಿಂದ ಮಹಿಳಾ ವಿಭಾಗದಲ್ಲಿ ಜಪಾನ್​ ಎದುರು ಕಂಚಿಗೆ ಹೋರಾಟ.
    *ಚೆಸ್​: ಮಧ್ಯಾಹ್ನ 12.30ರಿಂದ ಪುರುಷ-ಮಹಿಳಾ ತಂಡ ವಿಭಾಗದ 9ನೇ ಹಾಗೂ ಕೊನೇ ಸುತ್ತು.
    *ಬ್ಯಾಡ್ಮಿಂಟನ್​: ಬೆಳಗ್ಗೆ 11.30ರಿಂದ ಪುರುಷರ ಡಬಲ್ಸ್​ ಫೈನಲ್​.

    ಹೇಗಿದೆ ಈ ಸಲದ ವಿಶ್ವಕಪ್​ ಲೀಗ್​ ಸ್ವರೂಪ? ಸೆಮಿಫೈನಲ್​ಗೇರಲು ಎಷ್ಟು ಪಂದ್ಯ ಗೆಲ್ಲಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts