More

    ಏ. 15ರಿಂದ ಜನಗಣತಿ ಆರಂಭ

    ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತರ ಕಾರ್ಯಾಲಯದಲ್ಲಿ ಶುಕ್ರವಾರ 2020-21ರ ಜನಗಣತಿಯ ಪೂರ್ವಭಾವಿ ಸಭೆ ನಡೆಯಿತು.
    ಬೆಳಗಾವಿ ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ಎಸ್.ಎ. ಕಲಗುಪ್ಪಿ ಪಾಲಿಕೆ ಅಧಿಕಾರಿಗಳಿಗೆ ಜನಗಣತಿ ಕುರಿತು ಮಾಹಿತಿ ನೀಡಿದರು. ಏಪ್ರಿಲ್ 15ರಿಂದ ಮೇ 29ರ ವರೆಗೆ ಜನಗಣತಿ ಕಾರ್ಯ ನಡೆಯಲಿದೆ. ಇದರಲ್ಲಿ 15 ದಿನ ಮನೆಪಟ್ಟಿ ಕಲೆ ಹಾಕುವ ಕಾರ್ಯ ನಡೆಯಲಿದೆ ಎಂದರು.

    ತಹಸೀಲ್ದಾರರು ತಾಲೂಕು ನಕ್ಷೆಗಳನ್ನು ತಯಾರಿಸಬೇಕು. ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಬ್ಲಾಕ್‌ಗಳನ್ನು ರಚಿಸಿ ಎಷ್ಟು ಗಣತಿದಾರರ ಅಗತ್ಯವಿದೆ ಎಂಬುದರ ಬಗ್ಗೆ ಪಟ್ಟಿ ಸಲ್ಲಿಸಬೇಕು. ಈ ಬಗ್ಗೆ ಅಧಿಕೃತ ಸುತ್ತೋಲೆ ಬರಲಿದೆ ಎಂದರು.

    ಗಣತಿದಾರರಿಗೆ ತರಬೇತಿ: ಜನಗಣತಿ ವೇಳೆ 150 ರಿಂದ 180 ಕುಟುಂಬಗಳು ಅಥವಾ 650-850 ಜನಸಂಖ್ಯೆ ಇರುವ ಪ್ರದೇಶವನ್ನು ವಿಂಗಡಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಗಣತಿದಾರರಿಗೆ ತರಬೇತಿ ನೀಡಲಾಗುವುದು. ಪಾಲಿಕೆ ಅಧಿಕಾರಿಗಳು ಗಣತಿ ದಾರರೊಂದಿಗಿದ್ದು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯ ಜನಗಣತಿ ಅಂಕಿ-ಸಂಖ್ಯೆ ದಾಖಲಿಸಲು ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸರ್ಕಾರ ಹೊರಗುತ್ತಿಗೆ ಆಧಾರದಲ್ಲಿ ನೀಡಲಿದೆ ಎಂದು ತಿಳಿಸಿದರು. ಮಹಾನಗರದ ಜನಗಣತಿ ಅಧಿಕಾರಿಯಾಗಿ ನೇಮಕವಾದ ಕವಿತಾ ಯೋಗಪ್ಪನವರ, ಬ್ಲಾಕ್ ಜನಗಣತಿ ಅಧಿಕಾರಿಗಳಾಗಿ ನೇಮಕವಾದ ಎಸ್.ಎಚ್. ಮರತೆಣ್ಣವರ, ಆರ್.ಎಚ್. ಕುಲಕರ್ಣಿ, ಬಾಹುಬಲಿ ಚೌಗಲೆ, ಎಂ.ವೈ. ನರಸಣ್ಣವರ, ವಿ.ಎಸ್.ಹಿರೇಮಠ, ರಾಜಶೇಖರ ಚಿತ್ತವಾಡಗಿ, ಬಿ.ಎಚ್. ಹಿರೇಮಠ, ಎಚ್.ಬಿ. ಫಿರ್ಜಾದೆ, ಆನಂದ ಹೊಂಗಲ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts