More

    ಸೇನಾ ಹೆಲಿಕಾಪ್ಟರ್​ ಪತನ: 13ಕ್ಕೇರಿದ ಸಾವಿನ ಸಂಖ್ಯೆ, ಮೃತರ ಗುರುತು ಪತ್ತೆಗಾಗಿ ಡಿಎನ್​ಎ ಟೆಸ್ಟ್​

    ಚೆನ್ನೈ: ಇಂದು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್​ ಪತನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೆಹಗಳು ಗುರುತು ಸಿಗದಷ್ಟು ಸುಟ್ಟಿದ್ದು, ಮೃತರ ಗುರುತು ಪತ್ತೆಗೆ ಡಿಎನ್​ಎ ಟೆಸ್ಟ್​ ಮಾಡಲಾಗುತ್ತಿದೆ.

    ಬಿಪಿನ್​ ರಾವತ್​ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬಿಪಿನ್​ ರಾವತ್ ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಇದ್ದರು. ಹೆಲಿಕಾಪ್ಟರ್​ ಪತನ ದುರಂತದಲ್ಲಿ ಹಲವರು ಸ್ಥಳದಲ್ಲೇ ಸುಟ್ಟುಕರಕಲಾಗಿದ್ದರು. ಉಳಿದವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬದುಕುಳಿದಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಇನ್ನು ಸಿಡಿಎಸ್​ ಬಿಪಿನ್​ ರಾವತ್​ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಖಚಿತ ಮಾಹಿತಿ ಸಿಗಬೇಕಿದೆ.

    ಸೇನಾ ಹೆಲಿಕಾಪ್ಟರ್‌ ಪತನ: ನಾಲ್ವರ ಸಾವು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಚಿಂತಾಜಕ, ಉಳಿದವರಿಗಾಗಿ ಶೋಧ

    VIDEO: ಸೇನಾ ಅಧಿಕಾರಿಗಳಿದ್ದ ಹೆಲಿಕಾಪ್ಟರ್‌ ಪತನಕ್ಕೆ ಕಾರಣನಾದನೇ ಈ ವ್ಯಕ್ತಿ! ತನಿಖೆಗೆ ಆದೇಶ- ಪ್ರಪಾತದಲ್ಲಿ ಶವಗಳ ರಾಶಿ

    ಮಂಗಳೂರಲ್ಲಿ ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ! ಡೆತ್​ನೋಟ್​ನಲ್ಲಿ ಕಣ್ಣೀರ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts