More

    ಯಾರ ಮುಡಿಗೇರಲಿದೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರ? ಮತ ಎಣಿಕೆ ಶುರು

    ಬೆಳಗಾವಿ: ಪಂಚರಾಜ್ಯ ಚುನಾವಣೆ ಜತೆಯಲ್ಲೇ ರಾಜ್ಯದ ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು (ಭಾನುವಾರ) ಹೊರಬೀಳಲಿದೆ. ಈ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರ ಪೈಪೋಟಿ ಇದೆ.

    ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಜಿನ 9 ಹಾಲ್​ಗಳಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ರಾಯಚೂರಿನ ಎಸ್​ಆರ್​ಪಿಎಸ್​ ಪಿಯು ಕಾಲೇಜಿನ 2 ಹಾಲ್​ಗಳಲ್ಲಿ ಮಸ್ಕಿ ಹಾಗೂ ಬೀದರ್​ನ ಬಿವಿಬಿ ಕಾಲೇಜಿನ 2 ಹಾಲ್​ಗಳಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ನಡೆಯುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಗೆಲುವು ಯಾರ ಮುಡಿಗೆ ಎಂಬುದಕ್ಕೆ ತೆರೆಬೀಳಲಿದೆ.

    ಬೆಳಗಾವಿಯಲ್ಲಿ ಶೇ.56.02, ಬಸವಕಲ್ಯಾಣದಲ್ಲಿ ಶೇ.61.49 ಮತದಾನವಾಗಿದ್ದು, ಸಾರ್ವತ್ರಿಕ ಚುನಾವಣೆಗಿಂತ ಕಡಿಮೆ ಜನ ಮತ ಚಲಾಯಿಸಿದ್ದಾರೆ. ಮಸ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಅಂದರೆ ಶೇ.70.48 ಮತಗಳು ಚಲಾವಣೆಯಾಗಿವೆ.

    ಬೆಳಗಾವಿ ಉಪ ಸಮರದ ಅಭ್ಯರ್ಥಿಗಳು
    ಬಿಜೆಪಿ- ಮಂಗಲಾ ಅಂಗಡಿ
    ಕಾಂಗ್ರೆಸ್​- ಸತೀಶ್​ ಜಾರಕಿಹೊಳಿ

    ಬಸವಕಲ್ಯಾಣ ಉಪ ಸಮರದ ಅಭ್ಯರ್ಥಿಗಳು
    ಬಿಜೆಪಿ-ಶರಣು ಸಲಗರ
    ಕಾಂಗ್ರೆಸ್​-ಮಾಲಾ
    ಜೆಡಿಎಸ್​-ಸೈಯದ್​ ಅಲಿ ಖಾದ್ರಿ

    ಮಸ್ಕಿ ಉಪ ಸಮರದ ಅಭ್ಯರ್ಥಿಗಳು
    ಬಿಜೆಪಿ- ಪ್ರತಾಪಗೌಡ ಪಾಟೀಲ್​
    ಕಾಂಗ್ರೆಸ್​-ಬಸನಗೌಡ ತುವಿರ್ಹಾಳ

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 22 ವರ್ಷದ ಯುವತಿಗೆ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts