More

    10 ರೂ. ಕೊಟ್ಟು ತಂದ ಕೋಳಿಮರಿಗೆ 50 ರೂ. ಬಸ್​ ಟಿಕೆಟ್​!

    ಹೊಸನಗರ: ಆ ಪುಟ್ಟ ಕೋಳಿ ಮರಿ ಬೆಲೆ 10 ರೂಪಾಯಿ. ಆದ್ರೆ, ಅದರ ಪ್ರಯಾಣಕ್ಕೆ ತೆತ್ತ ಹಣ ಬರೋಬ್ಬರಿ 50 ರೂಪಾಯಿ. ಇಂತಹ ಸ್ವಾರಸ್ಯಕರ ಘಟನೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹೊಸನಗರ ತಾಲೂಕಿನಲ್ಲಿ ಸಂಭವಿಸಿದೆ.

    ಹೊಸನಗರದಿಂದ ಬೈಂದೂರು-ಶಿರೂರಿಗೆ ಹೋಗಲು ಅಲೆಮಾರಿ ಕುಟುಂಬದ ಮೂವರು ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಹತ್ತಿದ್ದರು. ಬಸ್ಸಿನ ಕಂಡಕ್ಟರ್​ ಬಂದು ಎಲ್ಲಿಗೆ ಎಂದು ಕೇಳಿದಾಗ ‘ಶಿರೂರಿಗೆ ಹೋಗಬೇಕು, ಮೂರು ಟಿಕೆಟ್​ ಕೊಡ್ರಿ’ ಅಂದ್ರು. ಆ ವೇಳೆ ಪುಟ್ಟ ಚೀಲದಿಂದ ಚಿವ್​ ಚಿವ್​.. ಶಬ್ದ ಬರುತ್ತಿತ್ತು. ಅದನ್ನು ಆಲಿಸಿದ ಕಂಡಕ್ಟರ್, ‘ಅದೇನು?’ ಎಂದು ಪ್ರಶ್ನಿಸಿದರು. ‘ಅದು ಕೋಳಿ ಮರಿ’ ಎಂದು ಆ ಮೂವರು ಪ್ರಯಾಣಿಕರು ಹೇಳುತ್ತಿದ್ದಂತೆ, ‘ಅದಕ್ಕೂ ಟಿಕೆಟ್​ ಮಾಡಬೇಕು, ರೂಲ್ಸ್​ ಇದೆ’ ಎಂದ ಕಂಡಕ್ಟರ್, ಕೋಳಿ ಮರಿಗೆ ಅರ್ಧ ಚಾರ್ಜ್​ ಅಂದ್ರೆ 50 ರೂಪಾಯಿಯ ಟಿಕೆಟ್​ ಕೊಟ್ಟರು.

    10 ರೂ. ಕೊಟ್ಟು ತಂದ ಕೋಳಿಮರಿಗೆ 50 ರೂ. ಬಸ್​ ಟಿಕೆಟ್​!

    ಮುಖಮುಖ ನೋಡಿಕೊಂಡ ಆ ಮೂವರು ಪ್ರಯಾಣಿಕರು, ಬೇರೆ ದಾರಿ ಕಾಣದೆ ಟಿಕೆಟ್​ ಪಡೆದು ಪ್ರಯಾಣಿಸಿದರು. ಆ ಕುಟುಂಬ 10 ರೂ. ಕೊಟ್ಟು ಕೋಳಿ ಮರಿ ತಂದಿತ್ತಂತೆ. ಬಸ್ಸಿನ ಟಿಕೆಟ್​ ದರ ನೋಡಿ ಮೂಗಿಗಿಂತ ಮೂಗುತಿ ಭಾರವಾಯ್ತು ಎಂದು ಗೊಣಗಿಕೊಂಡರು.

    ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts