More

    ಹಲವು ಸಮಸ್ಯೆಗಳ ಆಗರವಾದ ಬಸ್ ನಿಲ್ದಾಣ

    ತೇರದಾಳ : ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳು ಪ್ರಯಾಣಿಕರ ಜೀವ ಹಿಂಡುತ್ತಿವೆ.

    ಇದನ್ನೂ ಓದಿ: ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ

    ಬಸ್ ನಿಲ್ದಾಣ ಆವರಣದ ಜಾಗದಲ್ಲಿ ಬಯಲು ಶೌಚ, ಮೂತ್ರ ವಿಸರ್ಜನೆ, ನಿಲ್ದಾಣಕ್ಕೆ ಕಾಂಕ್ರಿಟ್ ಬೆಡ್ ಇದ್ದರೂ ಧೂಳಿನ ಅನುಭವ, ಬಸ್ ನಿಲುಗಡೆಯ ಫ್ಲಾಟ್‌ಫಾರ್ಮ್‌ಗಳಲ್ಲಿ ನಾಮಲಕ ಇಲ್ಲದ್ದಕ್ಕೆ ಪರದಾಡುವ ಪ್ರಯಾಣಿಕರು…ಇಂಥ ಹಲವಾರು ಸಮಸ್ಯೆಗಳು ಪ್ರಯಾಣಿಕರನ್ನು ನಿರಂತರ ಕಾಡುತ್ತಿವೆ.

    ಬಸ್ ನಿಲ್ದಾಣಕ್ಕೆ ನೂತನ ಕಟ್ಟಡ ನಿರ್ಮಿಸಿದರೂ ಕ್ಯಾಂಟೀನ್ ಸೇರಿ ವಿವಿಧ ಮಳಿಗೆಗಳು ಬಾಡಿಗೆಗೆ ಹೋಗದೆ ಖಾಲಿಯಾಗಿ ಉಳಿದಿವೆ. ನಿಲ್ದಾಣ ಆವರಣದಲ್ಲಿರುವ ಖುಲ್ಲಾ ಜಾಗದಲ್ಲಿ ಬಯಲು ಶೌಚ, ಮೂತ್ರ ವಿಸರ್ಜನೆಯಿಂದ ಮಲಿನ ವಾತಾವರಣ ನಿರ್ಮಾಣವಾಗುತ್ತಿದೆ.

    ಇದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಬೇಸತ್ತಿದ್ದಾರೆ.ನಿಲ್ದಾಣ ಆವರಣದಲ್ಲಿ ಗುಟ್ಖಾ, ಪಾನ್ ಜಗಿದು ಬೇಕಾಬಿಟ್ಟಿಯಾಗಿ ಉಗುಳಿ, ಗಲೀಜು ಮಾಡುತ್ತಿದ್ದರೂ ಅದನ್ನು ಕೇಳುವವರು ಯಾರೂ ಇಲ್ಲ.

    ವಿದ್ಯುತ್ ದೀಪದ ವ್ಯವಸ್ಥೆಗೆಂದು ಅಳವಡಿಸಿರುವ ಲಕಗಳು ಮಕ್ಕಳ ಕೈಗೆ ನಿಲುಕುವಂತಿವೆ. ಅನಾಹುತವಾಗುವ ಮುಂಚೆ ಫಲಕಗಳನ್ನು ಎತ್ತರ ಮಟ್ಟದಲ್ಲಿ ಅಳವಡಿಸುವ ಕಾರ್ಯವಾಗಬೇಕಿದೆ.

    ಇದನ್ನೂ ಓದಿ: ಕಲೆ ನೋಡುವ ಸಂವೇದನಾ ದೃಷ್ಟಿ ಬೆಳೆಸಿಕೊಳ್ಳಿ

    ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರದ ನಗರಗಳಿಗೆ ಹೋಗುವ ಬಸ್‌ಗಳು ಪಟ್ಟಣ ಮಾರ್ಗವಾಗಿ ಸಂಚರಿಸುತ್ತವೆ. ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಸಂಚಾರ ಮಾರ್ಗ ಸೂಚಿಸುವ ನಾಮಲಕ ಅಳವಡಿಸದ ಕಾರಣ ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿ ಅತ್ತಿಂದಿತ್ತ ಓಡಾಡುವಂತಾಗಿದೆ. ತೇರದಾಳ ಬಸ್ ನಿಲ್ದಾಣ ಗ್ರಾಮೀಣ ಬಸ್ ನಿಲ್ದಾಣದಂತೆ ಭಾಸವಾಗುತ್ತಿರುವುದು ಸಂಬಂಧಿಸಿದವರ ನಿರ್ಲಕ್ಷೃ ಎತ್ತಿ ತೋರಿಸುತ್ತಿದೆ.

    ತೇರದಾಳ ತಾಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಬಸ್ ಸಂಚಾರ ಮಾರ್ಗ ಸೂಚಿಸುವ ನಾಮಲಕ ಅಳವಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಖಾಲಿ ಇರುವ ಹೊಟೇಲ್ ಹಾಗೂ ಮಳಿಗೆ ಬಾಡಿಗೆ ಕೊಡುವ ನಿಟ್ಟಿನಲ್ಲಿ ಸಂಬಂಧಿಸಿದವರು ವಿಶೇಷ ಗಮನಹರಿಸಬೇಕು.

    ಸಂತೋಷ ಅಕ್ಕೆನ್ನವರ, ಮುಖಂಡ, ತೇರದಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts