ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ

Farmers, Govt. Scheme, Ilakalla, Department of Agriculture, Kisan Samman,
ಇಳಕಲ್ಲ ತಾಲೂಕಿನ ಹಿರೇಕೊಡಗಲಿ ಗ್ರಾಮದ ರೈತರಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ರೈತರಿಗೆ ಮಾಹಿತಿ ನೀಡಿದರು. ಮಂಜುನಾಥ ಬಿರಾದಾರಪಾಟೀಲ, ಸಂಜೀವಿನಿ ಸಿಬ್ಬಂದಿ ಮಂಜುನಾಥ ಪಾಟೀಲ ಹಾಗೂ ಬಸವರಾಜ ವಾಲಿಕಾರ ಹಾಗೂ ರೈತರಿದ್ದರು.
Published on

ಇಳಕಲ್ಲ: ನಗರದ ಕೃಷಿ ಇಲಾಖೆ ವತಿಯಿಂದ ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವಿಶೇಷ ಗ್ರಾಮಸಭೆ ಹಾಗೂ ಅಭಿಯಾನ ಇಳಕಲ್ಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ನಡೆಯಿತು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಾತನಾಡಿ, 2019ರ ಮುಂಚೆಯೇ ಪಹಣಿ ಹೊಂದಿರುವ ಪ್ರತಿಯೊಬ್ಬ ಜಮೀನಿನ ಮಾಲೀಕರನ್ನು ಈ ಯೋಜನೆಗೆ ಒಳಪಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಬೇಕು. ಇಂದೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ನರೇಗಾ ತಾಂತ್ರಿಕ ಸಹಾಯಕ ಮಂಜುನಾಥ ಬಿರಾದಾರಪಾಟೀಲ, ಸಂಜೀವಿನಿ ಸಿಬ್ಬಂದಿ ಮಂಜುನಾಥ ಪಾಟೀಲ ಹಾಗೂ ಬಸವರಾಜ ವಾಲಿಕಾರ ಹಾಗೂ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net