More

    ಎಮ್ಮೆ ಕಾಯುವ ಹುಡುಗನಿಗೆ ಲಾಠಿ ಏಟು!

    ಹಾವೇರಿ: ಎಮ್ಮೆಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಹುಡುಗನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರಿಂದ ಆಕ್ರೋಶಗೊಂಡ ಯುವಕನ ತಂದೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಬುಧವಾರ ಸಂಜೆ ನಡೆಯಿತು.

    ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಗೃಹ ಹಾಗೂ ಕೃಷಿ ಸಚಿವರು ಆಗಮಿಸಿದ್ದರು. ಸಚಿವರ ವಾಹನಗಳು ಮರಳಿ ಸಿದ್ದಪ್ಪ ಹೊಸಮನಿ ವೃತ್ತದ ಮೂಲಕ ಹಾಯ್ದು ಹೋಗುವವರಿದ್ದರು. ಈ ಸಮಯದಲ್ಲಿ ಯುವಕನ ನಾಲ್ಕು ಎಮ್ಮೆಗಳಲ್ಲಿ ಮೂರು ಎಮ್ಮೆಗಳು ರಸ್ತೆಯಿಂದ ಪಾಸಾಗಿದ್ದವು. ಇನ್ನೊಂದು ಎಮ್ಮೆ ರಸ್ತೆಯ ಇನ್ನೊಂದು ಬದಿಯಿತ್ತು. ‘ಅದನ್ನು ಹೊಡೆದುಕೊಂಡು ಹೋಗುತ್ತೇನೆ ಬಿಡ್ರಿ’ ಎಂದು ಕೇಳಿಕೊಂಡಿದ್ದಾನೆ. ಆದರೆ, ಪೊಲೀಸರು ಗೃಹ ಸಚಿವರ ವಾಹನ ಬರುತ್ತೇ ನಡಿ ಆ ಕಡೆ ಎಂದು ದಬಾಯಿಸಿದ್ದಾರೆ. ಆಗ ಯುವಕ ಮುಂದೆ ಹೋದ ಎಮ್ಮೆಗಳು ಎಲ್ಲಿಯಾದ್ರೂ ಹೋಗುತ್ತವೆ ಎಂದು ರಸ್ತೆಯಲ್ಲಿ ಎಮ್ಮೆಯನ್ನು ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಯುವಕನಿಗೆ ಲಾಠಿ ರುಚಿ ತೋರಿಸಿದ್ದಾರೆ. ಆದರೂ ಯುವಕ ಎಮ್ಮೆಯನ್ನು ಹೊಡೆದುಕೊಂಡು ಆ ಕಡೆ ಹೋಗಿದ್ದಾನೆ. ನಂತರ ಈ ವಿಷಯವನ್ನು ಪಾಲಕರಿಗೆ ತಿಳಿಸಿ ಅವರೊಂದಿಗೆ ಮರಳಿ ಸಿದ್ದಪ್ಪ ವೃತ್ತಕ್ಕೆ ಬಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ಸಮಯದಲ್ಲಿ ಪೊಲೀಸರು ಐದಾರು ಜನರಿದ್ದರೂ ಯಾರೂ ಅವನ ಪ್ರಶ್ನೆಗೆ ಉತ್ತರಿಸಲಿಲ್ಲ. ‘ಸಚಿವರ ವಾಹನ ಬರುತ್ತಿತ್ತು. ಎಮ್ಮೆಯೇನಾದ್ರು ಅಡ್ಡ ಬಂದಿದ್ರೆ ನಾವು ಸಸ್ಪೆಂಡ್ ಆಗುತ್ತಿದ್ದೆವು. ಹೀಗಾಗಿ ಅವನನ್ನು ದಬಾಯಿಸಿದ್ದೇವೆ, ಹೋಗಪಾ’ ಎಂದು ಯುವಕನ ಪಾಲಕನನ್ನು ಸಮಾಧಾನಿಸಿ ಕಳಿಸಿದರು. ಆದರೂ ಲಾಠಿ ರುಚಿ ತಿಂದ ಯುವಕ ಪೊಲೀಸರಿಗೆ ಅವಾಚ್ಯವಾಗಿ ಬೈದು, ‘ನಿಮಗೆ ಲಾಠಿಯಿಂದ ಹೊಡೆಯಲು ಯಾರು ಹೇಳಿದರು. ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದು ಧಮ್ಕಿ ಹಾಕಿದ. ಪೊಲೀಸರು ಮಾತ್ರ ಅವರಿಗೆ ಮರಳಿ ಮಾತನಾಡದೇ ಸಮಾಧಾನಿಸಿ ಕಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts