ತುಮಕೂರು: ತಾಲೂಕಿನ ಅರೆಯೂರು ಸಮೀಪದ ದೇವರಹಟ್ಟಿ ಕಟ್ಟೆಯಲ್ಲಿ ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.
ಮನೋಜ್ (12) ಹಾಗೂ ಚಿರಂತ್ (14) ಮೃತ ದುರ್ದೈವಿಗಳು. ದೇವರಹಟ್ಟಿಯ ಕಟ್ಟೆಯಲ್ಲಿ ಈ ಇಬ್ಬರು ಬಾಲಕರು ಎಂದಿನಂತೆ ಎಮ್ಮೆಗಳನ್ನ ತೊಳೆಯಲು ಹೋಗಿದ್ದರು. ಈ ವೇಳೆ ಎಮ್ಮೆ ನೀರಿನ ಒಳಗೆ ಒಬ್ಬ ಬಾಲಕನನ್ನು ಎಳೆದೊಯ್ದಿದ್ದು, ಆತನನ್ನು ರಕ್ಷಿಸಲು ಹೋಗಿ ಮತ್ತೊಬ್ಬ ಸಹ ನೀರಿನ ಆಳಕ್ಕೆ ಹೋಗಿದ್ದಾನೆ. ಕಡೆಗೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೋಟಿ ರೂ.ಕಾರ್ಬಳಿ ಬಂದ ಮುಸುಕುದಾರಿಗಳು ಮಾಡಿದ್ದೇನು? ಬೆಂಗಳೂರಲ್ಲಿ ಹಾಡಹಗಲೇ ಬೆಚ್ಚಿಬೀಳಿಸುವ ಕೃತ್ಯ!
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಬ್ಬೂರು ಪೊಲೀಸರು ಭೇಟಿ ನೀಡಿ ಬಾಲಕರ ಮೃತದೇಹಗಳನ್ನ ಹೊರತೆಗೆದು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದರು.
ಬಾಲಕರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟಿ ರೂ.ಕಾರ್ಬಳಿ ಬಂದ ಮುಸುಕುದಾರಿಗಳು ಮಾಡಿದ್ದೇನು? ಬೆಂಗಳೂರಲ್ಲಿ ಹಾಡಹಗಲೇ ಬೆಚ್ಚಿಬೀಳಿಸುವ ಕೃತ್ಯ!