More

    ಬಜೆಟ್​ ಅಧಿವೇಶನಲ್ಲಿ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಚರ್ಚಿಸಿ, ಸುಗಮ ಕಲಾಪಕ್ಕೆ ಸಹಕರಿಸಿ: ಪ್ರಧಾನಿ ನರೇಂದ್ರ ಮೋದಿ

    ದೆಹಲಿ: ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದೆ. ನಾಳೆ ಕೇಂದ್ರ ಬಜೆಟ್​ ಮಂಡನೆಯಾಗಲಿದೆ. ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲ ಸಂಸದರು ಮತ್ತು ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

    ಸೋಮವಾರ ಸಂಸತ್​ನಲ್ಲಿ ಬಜೆಟ್ ಅಧಿವೇಶನ ಆರಂಭದ ವೇಳೆ ಮಾತನಾಡಿದ ಪ್ರಧಾನಿ. ಬಜೆಟ್ ಅಧಿವೇಶನಕ್ಕೆ ನಾನು ಎಲ್ಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನೂ ಸ್ವಾಗತಿಸುತ್ತಿರುವೆ. ಭಾರತಕ್ಕೆ ಜಾಗತಿಕವಾಗಿ ಸಾಕಷ್ಟು ಅವಕಾಶಗಳಿವೆ. ಈ ಅಧಿವೇಶನವು ದೇಶದ ಆರ್ಥಿಕ ಪ್ರಗತಿ, ಲಸಿಕೆ ಕಾರ್ಯಕ್ರಮ, ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ವಿಶ್ವದಲ್ಲಿ ವಿಶ್ವಾಸ ಮೂಡಿಸುತ್ತಿದೆ. ಈ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆ ಮಾಡುತ್ತಾರೆ ಎಂದು ಭಾವಿಸಿರುವೆ ಎಂದರು.

    ಪಂಚ ರಾಜ್ಯ ಚುನಾವಣೆಯು ಅಧಿವೇಶನ ಮತ್ತು ಚರ್ಚೆಗಳ ಮೇಲೆ ಪರಿಣಾಮ ಬೀರುತ್ತೆ ಎಂಬುದು ನಿಜ. ಆದರೆ ಬಜೆಟ್ ಅಧಿವೇಶನವು ಇಡೀ ವರ್ಷಕ್ಕೆ ನೀಲನಕ್ಷೆ ಒದಗಿಸಿಕೊಡವಷ್ಟು ಫಲಪ್ರದವಾಗಲಿ ಎಂದು ಎಲ್ಲ ಸಂಸದರಿಗೆ ವಿನಂತಿಸುವೆ. ನಾವು ಈ ಅಧಿವೇಶನವನ್ನು ಹೆಚ್ಚು ಫಲಪ್ರದಗೊಳಿಸಿದರೆ, ಈ ವರ್ಷವೂ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಉತ್ತಮ ಅವಕಾಶ ನೀಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

    ಕೋವಿಡ್ 3ನೇ ಅಲೆಯ ಕರಿ ನೆರಳಿನಲ್ಲೇ ಬಜೆಟ್ ಅಧಿವೇಶ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

    ಲೋಕಸಭೆಯ ಸೆಕ್ರೆಟರಿಯೇಟ್ ಪ್ರಕಾರ ಮೇಲ್ಮನೆಯು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ, ಕೆಳಮನೆಯು ಸಂಜೆ 4ರಿಂದ ರಾತ್ರಿ 9ರವರೆಗೆ ಇರುತ್ತದೆ. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 11 ರವರೆಗೆ ನಡೆಯಲಿದ್ದು, ನಂತರ ವಿವಿಧ ಇಲಾಖೆಗಳಿಗೆ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಅಧಿವೇಶನವು ಮಾರ್ಚ್ 14ರಂದು ಪುನರಾರಂಭವಾಗುತ್ತದೆ ಮತ್ತು ಏಪ್ರಿಲ್ 8ರಂದು ಮುಕ್ತಾಯಗೊಳ್ಳುತ್ತದೆ.

    ಬಜೆಟ್​ ಅಧಿವೇಶನ: ಅಭಿವೃದ್ಧಿ ಚಕ್ರ ಓಡುತ್ತಲೇ ಇರಲಿ, ಒಟ್ಟಾಗಿ ದೇಶ ಮುನ್ನಡೆಸೋಣ ಎಂದು ಕರೆ ನೀಡಿದ ರಾಷ್ಟ್ರಪತಿ

    ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts