More

    ಬಜೆಟ್​ ಅಧಿವೇಶನ: ಅಭಿವೃದ್ಧಿ ಚಕ್ರ ಓಡುತ್ತಲೇ ಇರಲಿ, ಒಟ್ಟಾಗಿ ದೇಶ ಮುನ್ನಡೆಸೋಣ ಎಂದು ಕರೆ ನೀಡಿದ ರಾಷ್ಟ್ರಪತಿ

    ದೆಹಲಿ: ಕೇಂದ್ರ ಬಜೆಟ್​ ಅಧಿವೇಶನ ಸೋಮವಾರ ಆರಂಭಗೊಂಡಿದೆ. ಸಂಸತ್ತಿನ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ದೇಶದಲ್ಲಿ ಅಭಿವೃದ್ಧಿ ಚಕ್ರ ಓಡುತ್ತಿದೆ, ಇದು ನಿರಂತರವಾಗಿರಲಿ. ಒಗ್ಗಟ್ಟಿದ್ದರೆ ಗುರಿ ಸಾಧ್ಯ ಎಂದು ಪ್ರತಿಪಾದಿಸಿದರು.

    ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ, ದೇಶಕ್ಕೆ ಸಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮ. ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ಸಹಾಯ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುವೆ. ಈ ಸುದೀರ್ಘ 75 ವರ್ಷದ ಪಣಯದಲ್ಲಿ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ ಎಂದರು.

    ಕರೊನಾದತಂಹ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಕರೊನಾ ವಿರುದ್ಧ ಇಡೀ ದೇಶ ಒಟ್ಟಾಗಿ ಶ್ರಮಿಸಿದ್ದ ಪರಿ ಇಡೀ ಜಗತ್ತಿಗೇ ಮಾದರಿ. ಪ್ರಸಕ್ತ ಸರ್ಕಾರ ಕೈಗೊಂಡ ಹಲವು ಮಹತ್ವದ ನಿರ್ಣಯಗಳು ಭಾರತವನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಆಶಾದಾಯಕ ಬೆಳವಣಿಗೆಗೆ ನಾಂದಿ ಹಾಡಿದೆ. ಸಾಮಾಜಿಕ ಬದಲಾವಣೆಗೂ ನಾಂದಿ ಹಾಡಿದ್ದು, ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ತ್ರಿವಳಿ ತಲಾಖ್​ ನಿಷೇಧ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರದ ಐತಿಹಾಸಿಕ ಸಾಧನೆ ಮಾಡಿತು ಎಂದು ಪ್ರಶಂಸಿಸಿದರು. ಮಹಿಳೆಯರ ವಿವಾಹದ ವಯಸ್ಸನ್ನು 21ಕ್ಕೆ ಏರಿಸಿದ ನಿರ್ಧಾರವನ್ನು ಶ್ಲಾಘಿಸಿದರು.

    ಮೋದಿ ನೇತೃತ್ವದ ಸರ್ಕಾರ ಹೊಸ ಕಾರ್ಮಿಕ ಮತ್ತು ಬ್ಯಾಂಕಿಂಗ್ ಸುಧಾರಣೆಗಳನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯಲ್ಲಿ ಮಹಿಳಾ ಕೆಡೆಟ್‌ಗಳ ಪ್ರವೇಶಕ್ಕೆ ಸರ್ಕಾರ ಅನುಮೋದಿಸಿದೆ. 33 ಸೈನಿಕ ಶಾಲೆಗಲ್ಲಿ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಲು ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಮೊಬೈಲ್ ಉತ್ಪಾದನಾ ಉದ್ಯಮದ ಏರಿಕೆಯು ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ರಾಷ್ಟ್ರಪತಿ ಹೇಳಿದರು.

    ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆಯನ್ನೂ ರಾಷ್ಟ್ರಪತಿ ಶ್ಲಾಘಿಸಿದರು. ಎಲ್ಲರೂ ಒಟ್ಟಾಗಿ ಮುನ್ನಡದೆರೆ ಗುರಿ ತಲುಪಬಹುದು. ಎಲ್ಲರೂ ಒಟ್ಟಾಗಿ ಭಾರತವನ್ನ ಮುನ್ನಡೆಸೋಣ ಎಂದು ರಾಷ್ಟ್ರಪತಿ ಕರೆ ನೀಡಿದರು.

    ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

    ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಲ್ಲ… ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಸ್ವಾಮಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts