More

    ಪುತ್ರನಿಗಾಗಿ ಕರ್ಮಭೂಮಿಯನ್ನೇ ಬಿಟ್ಟುಕೊಟ್ಟ ಯಡಿಯೂರಪ್ಪ! ಶಿಕಾರಿಪುರದಲ್ಲಿ ಬಿಎಸ್​ವೈ ಮಹತ್ವದ ಘೋಷಣೆ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಾವ ಕೇತ್ಷದಿಂದ ಸ್ಪರ್ಧಿಸುತ್ತಾರೆ? ಎಂಬ ಕುತೂಹಲಕ್ಕೆ ಇಂದು ಸ್ವತಃ ಬಿಎಸ್​ವೈ ಅವರೇ ತೆರೆ ಎಳೆದಿದ್ದಾರೆ.

    ಮಗನಿಗಾಗಿ ತನ್ನ ಕರ್ಮಭೂಮಿಯನ್ನೇ ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲೇ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಬಿಎಸ್​ವೈ ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ.

    ನಾನು ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದೇನೆ. ಇಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ. ಮೈಸೂರು ಭಾಗದಲ್ಲಿ ವಿಜಯೇಂದ್ರರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಶಿಕಾರಿಪುರಲ್ಲಿ ನಾನು ಸ್ಪರ್ಧಿಸದ ಕಾರಣ ಅವರು ಇಲ್ಲೇ ಸ್ಪರ್ಧಿಸುತ್ತಾರೆ. ನನಗಿಂತ ಅತೀ ಹೆಚ್ಚು ಮತಗಳೊಂದಿಗೆ ಅವರನ್ನು ಶಿಕಾರಿಪುರ ಜನತೆ ಗೆಲ್ಲಿಸಿಕೊಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

    ಬಿಎಸ್​ವೈ ನಿರ್ಧಾರದ ಹಿಂದೆ ಹಲವು ರಾಜಕೀಯ ಲೆಕ್ಕಚಾರವಿದೆ. 75 ವರ್ಷ ವಯಸ್ಸು ದಾಟಿದವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ‌ನಕಾರ ಮಾಡುತ್ತೆ. ಇದನ್ನ ಅರಿತ ಬಿಎಸ್​ವೈ, ತನ್ನ ಉತ್ತರಾಧಿಕಾರಿ ವಿಜಯೇಂದ್ರಗೆ ತನ್ನ ಕೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ. ಮುಂದೆ ಒಂದು ವೇಳೆ ವಿಜಯೇಂದ್ರಗೆ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ತೀರ್ಮಾನ ಮಾಡಿದರೆ? ಹಾಗಾಗಿ ವಿಜಯೇಂದ್ರಗೆ ಯಾವ ಕ್ಷೇತ್ರವೆಂದು ಈಗಲೇ ಘೋಷಣೆ ಮಾಡಿದರೆ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂಬ ಲೆಕ್ಕಾಚಾರವೂ ಅಡಗಿರಬಹುದು. ಹೈಕಮಾಂಡ್ ಘೋಷಣೆಗೂ ಮುನ್ನಾ ಅಭ್ಯರ್ಥಿಯನ್ನ ಬಿಎಸ್​ವೈ ಘೋಷಣೆ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಚರ್ಚೆಯನ್ನ ಹುಟ್ಟುಹಾಕಿದೆ.

    ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್​ವೈ! ವಿಜಯೇಂದ್ರ ಮೊದಲ ಪ್ರತಿಕ್ರಿಯೆ ಇಲ್ಲಿದೆ

    ಮಂಗಳೂರಲ್ಲಿ ವಿದ್ಯಾರ್ಥಿಗಳ ಚುಂಬನ ವಿಡಿಯೋ ವೈರಲ್​ ಬೆನ್ನಲ್ಲೇ ಕಾಮಪುರಾಣ ಲೀಕ್​!

    ಬೆಂಗಳೂರಲ್ಲಿ ಬೈಕ್​ ಮೇಲೆ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ

    ಪ್ರೇಯಸಿಯ ತಲೆ ಕಡಿದು ಠಾಣೆಗೆ ತಂದ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ದುರಂತ, ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts