More

    ವಿಪಕ್ಷ ಹೇಳುತ್ತಿವೆ ಎಂದು ‘ಕೇಸರಿ ಬಾತ್’ ಬ್ಯಾನ್ ಮಾಡೋಕಾಗಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

    ಬೆಂಗಳೂರು: ಕೇಸರಿ ಕೇವಲ ಬಿಜೆಪಿ ಪಕ್ಷದ ಪ್ರತೀಕವಲ್ಲ. ಪೊಲೀಸರು ಕೇಸರಿ ಶಲ್ಯ ಧರಿಸಿದ ಬಗ್ಗೆ ರಾಜಕೀಯ ಮಾಡುವ ವಿಪಕ್ಷಗಳು ಮುಂದೆ ಕೇಸರಿ ಬಾತ್ ನಿಷೇಧಿಸಬೇಕು ಎಂದರೆ ಒಪ್ಪಲಾಗುತ್ತದೆಯೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ವಿಜಯಪುರದಲ್ಲಿ ದಸರಾ ಪೂಜೆಯ ವೇಳೆ ಪೊಲೀಸರು ಕೇಸರಿ ಶಲ್ಯ ಧರಿಸಿರುವುದು ವೈಯಕ್ತಿಕ ಮತ್ತು ಸಾಂಪ್ರದಾಯಿಕ ವಿಚಾರ. ಇದರ ಮೂಲಕ ಪೊಲೀಸ್ ಇಲಾಖೆ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಕೇಸರಿ ಒಂದು ಸಾಂಕೇತಿಕ ಉಡುಪು ಮಾತ್ರ, ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಯಾರು ಬೇಕಾದರೂ ಧರಿಸಬಹುದು. ಹೀಗಾಗಿ ಶಲ್ಯ ಧರಿಸಿದ್ದರಲ್ಲಿ ಪೊಲೀಸರ ತಪ್ಪಿಲ್ಲ. ವಿಪಕ್ಷಗಳು ಕೇಸರಿ ಶಲ್ಯ ಧರಿಸಿದ ಬಗ್ಗೆ ಟೀಕಿಸುವ ಮೂಲಕ ಒಂದು ಸಮುದಾಯ ಓಲೈಕೆ ಮಾಡುವುದನ್ನು ಕೈಬಿಡಬೇಕು. ವಿಪಕ್ಷಗಳ ಟೀಕೆಯಿಂದ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ ಎಂದರು.

    ಕೆಲ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಮುಸಲ್ಮಾನ ಪೊಲೀಸ್ ಸಿಬ್ಬಂದಿ ನಮಾಜ್ ಮಾಡಿ ಬರುತ್ತಾರೆ. ಅದನ್ನು ನಾವು ವಿರೋಧಿಸದೆ ಸಂಸ್ಕೃತಿಯ ಪ್ರತೀಕವಾಗಿ ಕಾಣುತ್ತೇವೆ. ಈಗ ಪೊಲೀಸರು ಪೂಜೆಯ ವೇಳೆ ಶಲ್ಯ ಧರಿಸಿದ್ದನ್ನು ಬಿಜೆಪಿ ಬೆಂಬಲಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಟೀಕೆಗೆ ಹೆದರಿ ಕೇಸರಿ ಬಣ್ಣವನ್ನು ನಿಷೇಧಿಸಲು ಸಾಧ್ಯವಿಲ್ಲ. ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ರಾಜಕೀಯ ಮಾಡಿದವರನ್ನು ಜನರು ಎಲ್ಲಿಟ್ಟಿದ್ದಾರೆ? ಎಂದು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.

    ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

    ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts