More

    ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ

    ಬೆಂಗಳೂರು: ಹಬ್ಬಗಳಲ್ಲಿ ಗಗನಕ್ಕೇರುತ್ತಿದ್ದ ಹೂವಿನ ಬೆಲೆ ಈ ಭಾರಿ ತಗ್ಗಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಹೂ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಸಿಗದೆ, ನಷ್ಟ ಉಂಟಾಗಿದೆ.

    ಅ.14 ಮತ್ತು 15ರಂದು ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವಿದ್ದು, ಬಹುತೇಕ ಜನ ವಾಹನಗಳು, ಯಂತ್ರಗಳು ಹಾಗೂ ಕಚೇರಿಗಳಲ್ಲಿ ಪೂಜೆ ಮಾಡುತ್ತಾರೆ. ಈ ವೇಳೆ ಬೂದುಗುಂಬಳ, ಬಾಳೆಕಂದು ಹಾಗೂ ನಿಂಬೆ ಹಣ್ಣು, ಹೂವು, ಮಾವಿನ ಸೊಪ್ಪಿಗೆ ಹೆಚ್ಚು ಬೇಡಿಕೆ. ನಗರದ ಕೆಆರ್​ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿ ಬಜಾರ್, ವಿಜಯನಗರ, ದಾಸರಹಳ್ಳಿ ಸೇರಿದಂತೆ ನಗರದ ಹಲವೆಡೆ ಈ ಎಲ್ಲ ವಸ್ತುವೂ ಲೋಡ್​ಗಟ್ಟಲೇ ಬಂದಿದೆಯಾದರೂ ಮಳೆಯಿಂದಾಗಿ ಬೆಲೆ ಇಳಿಕೆ ಕಂಡಿದೆ. ಈ ಪೈಕಿ ಹೂವಿನ ದರವೂ ಗಣನೀಯವಾಗಿ ಇಳಿಕೆಯಾಗಿದೆ.

    ಸೇವಂತಿಗೆ ಹೂವು ಚಿಲ್ಲರೆ ದರದಲ್ಲಿ ಕೆಜಿಗೆ 20-50 ರೂ. ಇದ್ದರೆ ಒಂದು ಮಾರು ಹೂವಿಗೆ ಕೇವಲ 20 ರೂ. ಇದೆ. ಕಳೆದ ವರ್ಷ ಈ ಅವಧಿಯಲ್ಲಿ ಒಂದು ಮಾರು ಹೂವಿಗೆ 100-150 ರೂ. ಇತ್ತು. ಆದರೆ ಮಳೆಯಿಂದಾಗಿ ಗುಣಮಟ್ಟದ ಹೂವು ಸಿಗುತ್ತಿಲ್ಲ. ಹಾಗಾಗಿ ಹೂವಿನ ಬೆಲೆ ಕುಸಿದಿದೆ. ಪ್ರತಿ ವರ್ಷ ಮಲ್ಲಿಗೆ ಹೂವು 1 ಸಾವಿರ ರೂ. ಇದ್ದರೆ, ಕನಕಾಂಬರ ಹೂವು 2 ಸಾವಿರ ರೂಪಾಯಿ ಮುಟ್ಟುತ್ತಿತ್ತು. ಈ ಬಾರಿ ಮಲ್ಲಿಗೆ ಹೂವಿನ ಬೆಲೆ ಕೆಜಿಗೆ 500 ರೂ. ಇದೆ. ಕನಕಾಂಬರ ಕೆಜಿಗೆ 300 ರೂ. ಇದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ಚಿಲ್ಲರೆ ವ್ಯಾಪಾರಿ ಜಿ.ಎಂ. ದಿವಾಕರ.

    ಮಾರುಕಟ್ಟೆಯಲ್ಲಿ ಬಿಡಿ ಹೂವಿನ ದರ ಕೆ.ಜಿ.ಗೆ ಎಷ್ಟಿದೆ?
    ಮಲ್ಲಿಗೆ ಹೂವು 500 ರೂ.
    ಕನಕಾಂಬರ 300 ರೂ.
    ಸೇವಂತಿಗೆ 10-50 ರೂ.
    ಕಾಕಡ 300 ರೂ.
    ಚೆಂಡುಹೂವು 10-40 ರೂ.
    ಗುಲಾಬಿ ಹೂವು 80-100 ರೂ.
    ಸುಗಂಧರಾಜ 120 ರೂ.

    ಆಯುಧಪೂಜೆ ಇದ್ದರೂ ಹೂವಿನ ಬೆಲೆ ಇಳಿಕೆ! ಯಾವ ಹೂವಿಗೆ ಎಷ್ಟು ದರ? ಇಲ್ಲಿದೆ ಮಾಹಿತಿ

    ಬೂದುಗುಂಬಳ ಬೆಲೆ ಇಳಿಕೆ:ರಾಮನಗರ, ಪಾಂಡವಪುರ, ಕೋಲಾರ, ಗೌರಿಬಿದನೂರು, ಮಾಲೂರು ಮತ್ತಿತರ ಭಾಗಗಳಿಂದ ಬೂದಗುಂಬಳ ನಗರದ ಮಾರುಕಟ್ಟೆಗಳಿಗೆ ಆಗಮಿಸಿದೆ. ಜತೆಗೆ ತಮಿಳುನಾಡಿನ ಧರ್ಮಪುರ, ತಿರುಚಿ, ಆಂಧ್ರದ ಅನಂತಪುರ ಜಿಲ್ಲೆಗಳಿಂದಲೂ ಸಾಕಷ್ಟು ಪ್ರಮಾಣದಲ್ಲಿ ಬಂದಿದೆ. ಆದರೆ ಮಳೆಯಿಂದಾಗಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಕಳೆದ ವರ್ಷ ದಸರಾ ಹಬ್ಬಕ್ಕೆ ಮಾರುಕಟ್ಟೆ ಸುತ್ತಮುತ್ತ ಒಂದು ಕೆ.ಜಿ. ಬೂದುಗುಂಬಳ 18-20 ರೂ. ಇದ್ದುದು ಇದೀಗ 12 ರಿಂದ 14 ರೂ.ಗೆ ಇಳಿದಿದೆ ಎನ್ನುತ್ತಾರೆ ಸಗಟು ವ್ಯಾಪಾರಿ ಮಲ್ಲಪ್ಪ.

    ಹೂವಿನ ದರ ಮಾರುಕಟ್ಟೆಯಲ್ಲಿ ಕಡಿಮೆ ಇದೆಯಾದರೂ ಚಿಲ್ಲರೆ ವ್ಯಾಪಾರಿಗಳು ನಾಲ್ಕುಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂತು.

    ಡಿಕೆಶಿ ಕಲೆಕ್ಷನ್​ ಗಿರಾಕಿ, ಕುಡುಕನ ಹಾಗೆ ಮಾತಾಡ್ತಾರೆ… ಕೋಲಾಹಲ ಸೃಷ್ಟಿಸಿದೆ ಸಲೀಂ-ಉಗ್ರಪ್ಪ ಸಂಭಾಷಣೆ

    ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಚಪ್ಪಾಳೆ ಹೊಡೆಯೋರು ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts