More

    ಎಲ್ಲ ಧರ್ಮದ ವಿದ್ಯಾರ್ಥಿಗಳೂ ಸಮವಸ್ತ್ರ ನಿಯಮ ಪಾಲಿಸಬೇಕು: ಅಮಿತ್​ ಷಾ

    ನವದೆಹಲಿ: ಎಲ್ಲ ಧರ್ಮಗಳ ವಿದ್ಯಾರ್ಥಿಗಳೂ ಶಾಲೆಗಳ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕದಲ್ಲಿ ಹಿಜಾಬ್​ ವಿವಾದ ಇನ್ನೂ ತಣ್ಣಗಾಗಿಲ್ಲ. ಕೇಶರಿ ಶಾಲು ಮತ್ತು ಹಿಜಾಬ್​ ಅನ್ನು ತರಗತಿಯೊಳಗೆ ಧರಿಸಿಕೊಂಡು ಹೋಗುವಂತಿಲ್ಲ ಎಂದು ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದ್ದರೂ ಬಹುತೇಕರು ಪಾಲಿಸುತ್ತಿಲ್ಲ. ಹಿಜಾಬ್​ ಇಲ್ಲದೆ ತರಗತಿಗೆ ಹಾಜರ್​ ಆಗುವುದಿಲ್ಲ ಎಂದು ಪಟ್ಟು ಹಿಡಿದ ಹಲವರು ಪರೀಕ್ಷೆಗೂ ಗೈರಾಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಪ್ರತಿಕ್ರಿಯಿಸಿರುವ ಅಮಿತ್​ ಷಾ, ಎಲ್ಲ ಧರ್ಮದವರೂ ಶಾಲಾ ಸಮವಸ್ತ್ರವನ್ನ ಒಪ್ಪಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ವಿಚಾರ ಎಂದಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರ್ನಾಟಕದಲ್ಲಿನ ಹಿಜಾಬ್​ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮಿತ್​ ಶಾ, ಪ್ರಕರಣ ನ್ಯಾಯಾಲಯದಲ್ಲಿದೆ. ಕೋರ್ಟ್​ ಏನೇ ತೀರ್ಪು ಕೊಟ್ಟರೂ ಜನತೆ ಸ್ವೀಕರಿಸಬೇಕು. ನ್ಯಾಯಾಲಯದ ಆದೇಶವನ್ನ ಗೌರವಿಸುತ್ತೇವೆ. ಯಾವುದೇ ವಿದ್ಯಾರ್ಥಿಗೂ ಧಾರ್ಮಿಕ ಉಡುಗೆ ಧರಿಸಲು ಯಾರೂ ಒತ್ತಾಯಿಸಬಾರದು. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದಾದರೆ ಪ್ರತಿಯೊಬ್ಬರೂ ಧರಿಸಬೇಕು. ನ್ಯಾಯಾಲಯದ ತೀರ್ಪು ಪ್ರಕಟ ಆಗುವವರೆಗೂ ನನ್ನ ವೈಕ್ತಿಯ ಅಭಿಪ್ರಾಯದಲ್ಲಿ ನಂಬಿಕೆ ಇಡುವೆ. ಆದರೆ, ನ್ಯಾಯಾಲದ ತೀರ್ಪು ಏನೇ ಆದರೂ ಅದನ್ನು ಒಪ್ಪಿಕೊಳ್ಳುವೆ ಎಂದಿದ್ದಾರೆ.

    ಮೇವು ಹಗರಣದ 5ನೇ ಪ್ರಕರಣ: ಲಾಲು​ಗೆ 5 ವರ್ಷ ಜೈಲು ಶಿಕ್ಷೆ, 60 ಲಕ್ಷ ರೂ. ದಂಡ

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ: ಅಂತಿಮ ಯಾತ್ರೆ ವೇಳೆ ಬೈಕ್​ಗೆ ಬೆಂಕಿ, ಮನೆಗಳಿಗೆ ಕಲ್ಲು ತೂರಾಟ

    ಸ್ನಾನಕ್ಕೆ ಹೋದ್ರೆ ಇಣುಕಿ ನೋಡ್ತಾನೆ, ಲೈಂಗಿಕತೆ​ಗಾಗಿ ಪೀಡಿಸ್ತಾನೆ… ಸೊಸೆಗೆ ಮಾವ ಕೊಟ್ಟ ಕಾಟ ಅಷ್ಟಿಷ್ಟಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts