More

    ಬಾಲಿವುಡ್​ ನಟ ಅಕ್ಷಯ್ ಕುಮಾರ್​ ತಾಯಿ ನಿಧನ: ಅಮ್ಮನ ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿದ ನಟ

    ಮುಂಬೈ: ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇಂದು(ಬುಧವಾರ) ಬೆಳಗ್ಗೆ ನಿಧನರಾದರು.

    ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಭಾಟಿಯಾ ಅವರನ್ನು ಎರಡು ದಿನದ ಹಿಂದೆ ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಈ ವೇಳೆ ಸಿಂಡ್ರೆಲಾ ಸಿನಿಮಾ ಶೂಟಿಂಗ್​ಗಾಗಿ ಅಕ್ಷಯ್​ ಕುಮಾರ್​ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್​ ಅನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ವಾಪಸ್​ ಆಗಿದ್ದರು.

    ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಅಕ್ಷಯ್​ರ ಅಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿಯನ್ನು ಸ್ವತಃ ಅಕ್ಷಯ್​ ಅವರೇ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ‘ಅವಳು ನನ್ನ ಮೂಲ. ಅಮ್ಮ ಬದುಕಿಲ್ಲ ಎಂಬ ಕಹಿಸತ್ಯ ನನಗೆ ಸಹಿಸಲಾಗದ ನೋವನ್ನು ಕೊಟ್ಟಿದೆ. ನನ್ನ ಅಮ್ಮ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಬೇರೆ ಜಗತ್ತಿನಲ್ಲಿರುವ ನನ್ನ ತಂದೆ ಜತೆ ನನ್ನಮ್ಮ ಸೇರಿಕೊಂಡಿದ್ದಾರೆ. ಓ ಶಾಂತಿ…’ ಎಂದು ಅಕ್ಷಯ್ ಕುಮಾರ್ ಟ್ವಿಟರ್​ನಲ್ಲಿ ಮನದ ನೋವನ್ನು ಅಕ್ಷರಕ್ಕಿಳಿಸಿದ್ದಾರೆ.

    ನಕಲಿ ಐಎಎಸ್ ಅಧಿಕಾರಿ ಬಂಧನ! ಈತ ರವಿಶಂಕರ್ ಗುರೂಜಿ ಅವರಿಗೂ ಬಲೆ ಬೀಸಿದ್ದ

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts